ತ್ರಿಪುರ: ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ 17 ಜನರಿಗೆ ಗಾಯ

ತ್ರಿಪುರದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು 11 ಪೊಲೀಸ್ ಸಿಬ್ಬಂದಿ, ಇಬ್ಬರು ಫೋಟೊ ಪತ್ರಕರ್ತರು ಸೇರಿ 17 ಜನರಿಗೆ ಗಾಯಗಳುಂಟಾಗಿದೆ.
ಬಿಜೆಪಿ-ಟಿಎಂಸಿ
ಬಿಜೆಪಿ-ಟಿಎಂಸಿ
Updated on: 
ಅಗರ್ತಲಾ: ತ್ರಿಪುರದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು 11 ಪೊಲೀಸ್ ಸಿಬ್ಬಂದಿ, ಇಬ್ಬರು ಫೋಟೊ ಪತ್ರಕರ್ತರು ಸೇರಿ 17 ಜನರಿಗೆ ಗಾಯಗಳುಂಟಾಗಿದೆ. 
ಪಶ್ಚಿಮ ತ್ರಿಪುರದ ಎಸ್ ಪಿ ಅಭಿಜಿತ್ ಸಪ್ತರ್ಷಿ ಈ ಬಗ್ಗೆ ಮಾಹಿತಿ ನೀಡಿದ್ದು, ಟಿಎಂಸಿ ನಾಯಕ ಸುದೀಪ್ ರಾಯ್ ಬುರ್ಮನ್ ನ ಹಿರಿಯ ಸಹೋದರ ಸಂದೀಪ್ ರಾಯ್ ಬುರ್ಮನ್ ಅವರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ ಘಟನೆ ನಡೆದ ನಂತರ ಘರ್ಷಣೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. 
ಉಭಯ ಪಕ್ಷಗಳ ಬೆಂಬಲಿಗರು ಪಶ್ಚಿಮ ಅಗರ್ತಲಾದಲ್ಲಿ ದೂರು ದಾಖಲಿಸಿದ್ದಾರೆ ಎಂದು ಎಸ್ ಪಿ ಅಭಿಜಿತ್ ಸಪ್ತರ್ಷಿ ಹೇಳಿದ್ದಾರೆ. ಬಿಜೆಪಿ ಉಪಾಧ್ಯಕ್ಷ, ಟಿಎಂಸಿ ನಾಯಕರೂ ಈ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಫೋಟೊ ಪತ್ರಕರ್ತರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘರ್ಷಣೆ ತೀವ್ರ ಸ್ವರೂಪ ಪಡೆಯುವುದನ್ನು ತಪ್ಪಿಸಲು ಸಿಆರ್ ಪಿಸಿ ಸೆಕ್ಷನ್ 144 ರ ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com