ಹನುಮಂತ ರಾವ್ ಹಾಗೂ ಶಶಿಕಲಾ ದಂಪತಿಗಳು ವೃತ್ತಿಯಲ್ಲಿ ಸಾಫ್ಟ್'ವೇರ್ ಗಳಾಗಿದ್ದು, ಕಳೆದ 9 ವರ್ಷಗಳಿಂದಲೂ ಅಮೆರಿಕದಲ್ಲಿ ನೆಲೆಯೂರಿದ್ದಾರೆ. ಶಶಿಕಲಾ ಅವರು ಮನೆಯಲ್ಲಿದ್ದುಕೊಂಡೇ ಕಚೇರಿಯ ಕೆಲಸಗಳನ್ನು ಮಾಡುತ್ತಿದ್ದರು. ಹನುಮಂತ ಅವರು ನಿನ್ನೆ ಆಫೀಸಿಗೆ ಹೋಗಿ ಮನೆಗೆ ಬಂದಾಗ ಪತ್ನಿ ಮತ್ತು ಮಗ ಇಬ್ಬರೂ ಶವವಾಗಿ ಬಿದ್ದಿರುವುದು ಕಂಡುಬಂದಿದೆ.