10 ಗಡಿ ಭದ್ರತಾ ಸಿಬ್ಬಂದಿಗಳ ಹತ್ಯೆ: ಪಾಕಿಸ್ತಾನದೊಂದಿಗೆ ವಿಷಯ ಪ್ರಸ್ತಾಪಿಸಿದ ಇರಾನ್

ಪಾಕಿಸ್ತಾನ ಭಾರತದ ಗಡಿಯಲ್ಲಷ್ಟೇ ಅಲ್ಲದೇ ಇರಾನ್ ಗಡಿಯಲ್ಲೂ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಇರಾನ್ ಗಡಿಯಲ್ಲಿ 10 ಗಡಿ ಭದ್ರತಾ ಸಿಬ್ಬಂದಿಗಳನ್ನು ಹತ್ಯೆ ಮಾಡಿದೆ.
ಪಾಕಿಸ್ತಾನ-ಇರಾನ್ ಗಡಿ
ಪಾಕಿಸ್ತಾನ-ಇರಾನ್ ಗಡಿ
Updated on
ಇಸ್ಲಾಮಾಬಾದ್: ಪಾಕಿಸ್ತಾನ ಭಾರತದ ಗಡಿಯಲ್ಲಷ್ಟೇ ಅಲ್ಲದೇ ಇರಾನ್ ಗಡಿಯಲ್ಲೂ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಇರಾನ್ ಗಡಿಯಲ್ಲಿ 10 ಗಡಿ ಭದ್ರತಾ ಸಿಬ್ಬಂದಿಗಳನ್ನು ಹತ್ಯೆ ಮಾಡಿದೆ. 
ಇರಾನ್ ನ ವಿದೇಶಾಂಗ ಸಚಿವ ಜಾವದ್ ಜರೀಫ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಪಾಕಿಸ್ತಾನದ ಯೋಧರು ಇರಾನ್ ಗಡಿಯಲ್ಲಿ ಇರಾನ್ ನ ಗಡಿ ಭದ್ರತಾ ಪಡೆಯ 10 ಸಿಬ್ಬಂದಿಗಳನ್ನು ಹತ್ಯೆ ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 
"ಇರಾನ್-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟಾಗಲು ಅವಕಾಶ ನೀಡುವುದಿಲ್ಲ". ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ನಾಸಿರ್ ಅಲಿ ಖಾನ್ ಹೇಳಿರುವುದಾಗಿ ರೆಡಿಯೋ ಪಾಕಿಸ್ತಾನ್ ವರದಿ ಮಾಡಿದೆ. ಕಳೆದ ವಾರ ಇರಾನ್ ನ ಸಿಸ್ತಾನ್ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಪಾಕಿಸ್ತಾನ ಭಯೋತ್ಪಾದಕರು ಇರಾನ್ ಯೋಧರನ್ನು ಹತ್ಯೆ ಮಾಡಿದ್ದರು. ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಇರಾನ್ ನ ಪೊಲೀಸ್ ಅಧಿಕಾರಿಗಳು " ಯೋಧರ ಹತ್ಯೆಗೆ ಪಾಕಿಸ್ತಾನ ಸರ್ಕಾರವೇ ಹೊಣೆ" ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com