ನವದೆಹಲಿ: ದೇಶದೆಲ್ಲೆಡೆ ಉಗ್ರ ಕೃತ್ಯಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಜೀವಂತ ಗ್ರೆನೇಡ್ ವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ನಿನ್ನೆ ಸಂಜೆ ಕೆಂಪುಕೋಟೆ ಆವರಣದಲ್ಲಿ ಸ್ವಚ್ಛಗೊಳಿಸುವ ವೇಳೆ ಜೀವಂತ ಗ್ರೆನೇಡ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಭಾರತ ಪುರಾತತ್ವ ಸಮೀಕ್ಷಾಧಿಕಾರಿ ಕಣ್ಣಿಗೆ ಈ ಗ್ರೆನೇಡ್ ಬಿದ್ದಿದ್ದು, ಕೂಡಲೇ ಭದ್ರತಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಭದ್ರತೆ ಹೆಚ್ಚಿದ್ದು, ಎನ್ಎಸ್'ಜಿ ಪಡೆ ಇಂದು ಗ್ರೆನೇಡ್ ನ್ನು ಬಹಳ ಎಚ್ಚರಿಕೆಯಿಂದ ನಿಷ್ಕ್ರಿಯಗೊಳಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.