ಬಿಎಸ್ ಪಿಗೆ ಮಾಯಾವತಿ 50 ಕೋಟಿ ರೂಪಾಯಿ ಕೇಳಿದ್ದರು: ಸಿದ್ದಿಕಿ

ಪಕ್ಷವಿರೋಧಿ ಚಟುವಟಿಕೆ ಆರೋಪದಡಿ ಪಕ್ಷದಿಂದ ಉಚ್ಛಾಟನೆಗೊಂಡ ಬಿಎಸ್ ಪಿ ನಾಯಕ ಸಿದ್ದಿಕಿ ಈಗ ಬಿಎಸ್ ಪಿ ನಾಯಕಿ ಮಾಯಾವತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದಿಕಿ
ಸಿದ್ದಿಕಿ
ಲಖನೌ: ಪಕ್ಷವಿರೋಧಿ ಚಟುವಟಿಕೆ ಆರೋಪದಡಿ ಪಕ್ಷದಿಂದ ಉಚ್ಛಾಟನೆಗೊಂಡ ಬಿಎಸ್ ಪಿ ನಾಯಕ ಸಿದ್ದಿಕಿ ಈಗ ಬಿಎಸ್ ಪಿ ನಾಯಕಿ ಮಾಯಾವತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮಾಯಾವತಿ ಪಕ್ಷಕ್ಕಾಗಿ 50 ಕೋಟಿ ರೂಪಾಯಿ ಕೇಳಿದ್ದರು ಎಂದಿದ್ದಾರೆ. 
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಿದ್ದಿಕಿ, ಮಾಯಾವತಿ ಹಾಗೂ ಅವರ ಸಹೋದರ ಇಬ್ಬರೂ ಪಕ್ಷಕ್ಕೆ 50 ಕೋಟಿ ರೂಪಾಯಿ ನೀಡುವಂತೆ ಅಕ್ರಮ ಬೇಡಿಕೆ ಮುಂದಿಟ್ಟಿದ್ದರು. ನಾನೆಲ್ಲಿಂದ ಅಷ್ಟು ಹಣ ತರಲಿ ಎಂಬ ನನ್ನ ಪ್ರಶ್ನೆಗೆ, "ನಿಮ್ಮ ಆಸ್ತಿಯನ್ನು ಮಾರಾಟ ಮಾಡಿ ಹಣ ಕೊಡು" ಎಂಬ ಪ್ರತಿಕ್ರಿಯೆ ನೀಡಿದ್ದರು" ಎಂದು ಸಿದ್ದಿಕಿ ಆರೋಪಿಸಿದ್ದಾರೆ. 
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಹಾಗೂ ಎಸ್ ಪಿ ಮೈತ್ರಿ ಮಾಡಿಕೊಂಡಿದ್ದವು ಈ ಬಗ್ಗೆ ಮುಸ್ಲಿಮ್ ಸಮುದಾಯ ಎಚ್ಚರಿಕೆ ನೀಡುತ್ತಿದೆ ಎಂದು ಹೇಳಿದಾಗ ಮುಸ್ಲಿಂ ಸಮುದಾಯ ದ್ರೋಹಿಗಳೆಂದು ಟೀಕಿಸಿದ್ದರು ಎಂದು ಸಿದ್ದಿಕಿ ಮಾಯಾವತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com