ಕಾಶ್ಮೀರ ವಿವಾದ: ಭಾರತದೊಂದಿಗೆ ಮಾತುಕತೆ ನಡೆಸಲು ಪಾಕ್ ಇಂಗಿತ

ಕಾಶ್ಮೀರ ಸಮಸ್ಯೆ ಬಗೆಹರಿಯಲು ಉಭಯ ರಾಷ್ಟ್ರಗಳ ನಡುವಣ ಮಾತುಕತೆಯೊಂದೇ ಪರಿಹಾರ ಎಂದಿರುವ ಪಾಕಿಸ್ತಾನ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು...
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಷ್
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಷ್
Updated on: 
ಬೀಜಿಂಗ್: ಕಾಶ್ಮೀರ ಸಮಸ್ಯೆ ಬಗೆಹರಿಯಲು ಉಭಯ ರಾಷ್ಟ್ರಗಳ ನಡುವಣ ಮಾತುಕತೆಯೊಂದೇ ಪರಿಹಾರ ಎಂದಿರುವ ಪಾಕಿಸ್ತಾನ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಶನಿವಾರ ಹೇಳಿದೆ. 
ಚೀನಾ ದೇಶದ ಪ್ರಧಾನಮಂತ್ರಿ ಲಿ ಕೆಖಿಯಾಂಗ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಷ್ ಅವರು, ಕಾಶ್ಮೀರ ಸಮಸ್ಯೆ ಬಗೆಹರಿಯಲು ಮಾತುಕತೆಯೊಂದೇ ಪರಿಹಾರವಾಗಿದ್ದು, ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿದ್ದಾರೆ. 
ಕಾಶ್ಮೀರ ವಿವಾದ ಕುರಿತಂತೆ ಚೀನಾ ಯಾವಾಗಲೂ ಪಾಕಿಸ್ತಾನ ನಿಲುವಿಗೆ ಬೆಂಬಲ ವ್ಯಕ್ತಪಡಿಸಿಕೊಂಡು ಬಂದಿದೆ. ಈ ಬೆಂಬಲ ಹಾಗೂ ಸಹಕಾರ ಭವಿಷ್ಯದಲ್ಲೂ ಮುಂದುವರೆಯಲಿದೆ ಎಂಬ ವಿಶ್ವಾಸ ನಮಗಿದೆ. ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಉಭಯ ರಾಷ್ಟ್ರಗಳ ನಡುವಣ ಮಾತುಕತೆಯೊಂದೇ ಪರಿಹಾರವಾಗಿದೆ ಎಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ಕಾಶ್ಮೀರ ವಿವಾದ ಕುರಿತಂತೆ ಮಾತನಾಡಿದ್ದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, ಭಾರತ ಹಾಗೂ ಪಾಕಿಸ್ತಾನದ ನಡುವಿನ ಕಾಶ್ಮೀರ ಸಮಸ್ಯೆ ಇತಿಹಾಸದಿಂದಲೂ ಇದೆ. ಸೂಕ್ತ ರೀತಿಯ ಸಮಾಲೋಚನೆ ಹಾಗೂ ಮಾತುಕತೆ ಮೂಲಕ ಭಾರತ ಮತ್ತು ಪಾಕಿಸ್ತಾನ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com