ವಾಟರ್ ಟ್ಯಾಂಕರ್ ಹಗರಣ: ಕೇಜ್ರಿವಾಲ್ ರಾಜಕೀಯ ಸಲಹೆಗಾರನಿಗೆ ಎಸಿಬಿ ಸಮನ್ಸ್

ವಾಟರ್ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೇಜ್ರಿವಾಲ್ ಅವರ ರಾಜಕೀಯ ಕಾರ್ಯದರ್ಶಿ ವೈಭವ್ ಕುಮಾರ್ ಗೆ ಸಮನ್ಸ್ ಜಾರಿ ಮಾಡಿದೆ.
ಕೇಜ್ರಿವಾಲ್
ಕೇಜ್ರಿವಾಲ್
Updated on: 
ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ವಾಟರ್ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೇಜ್ರಿವಾಲ್ ಅವರ ರಾಜಕೀಯ ಕಾರ್ಯದರ್ಶಿ ವೈಭವ್ ಕುಮಾರ್ ಗೆ ಸಮನ್ಸ್ ಜಾರಿ ಮಾಡಿದೆ. 
ಮೇ.17 ರಂದು ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ಜಾರಿ ಮಾಡಿದೆ. ಆಮ್ ಆದ್ಮಿ ಪಕ್ಷದಿಂದ  ವಜಾಗೊಂಡಿರುವ ನಾಯಕ ಕಪಿಲ್ ಮಿಶ್ರಾ, ಆಮ್ ಆದ್ಮಿ ಸರ್ಕಾರ ನಡೆಸಿರುವ ವಾಟರ್ ಟ್ಯಾಂಕರ್ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ 400 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. 
ಕಪಿಲ್ ಮಿಶ್ರಾ ವಾಟರ್ ಟ್ಯಾಂಕರ್ ಹಗರಣದ ಕುರಿತ ದಾಖಲೆಗಳನ್ನು ಎಸಿಬಿಗೆ ನೀಡಿ ಸರ್ಕಾರ ಬೊಕ್ಕಸದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com