ಕಾನ್ಪುರ: ಮದುವೆ ಸಮಾರಂಭದಲ್ಲಿ ತನ್ನೊಂದಿಗೆ ಡ್ಯಾನ್ಸ್ ಮಾಡಲು ನಿರಾಕರಿಸಿದ ಪತ್ನಿಯನ್ನು ಮನೆಯ ಮೇಲ್ಚಾವಣಿ ಮೇಲಿಂದ ತಳ್ಳಿರುವ ಘಟನೆ ಬಾಂದಾ ಜಿಲ್ಲೆಯ ಚಿಲ್ಲಾಘಟ್ ನ ದಿಗ್ವಾಟ್ ಎಂಬ ಹಳ್ಳಿಯಲ್ಲಿ ನಡೆದಿದೆ.
ವಿಶಾಖ ತಿವಾರಿ ಎಂಬ ಮಹಿಳೆಯ ಎಂರಡು ಕಾಲುಗಳು ಮುರಿದಿವೆ, ಜೊತೆಗೆ ಆಕೆಯ ಕೈ ಮತ್ತು ಹೊಟ್ಟೆಗೆ ತೀವ್ರವಾದ ಪೆಟ್ಟು ಬಿದ್ದಿದೆ.
ಶನಿವಾರ ಸಂಜೆ ದಿಗ್ವಾತ್ ಗ್ರಾಮದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ವಿಶಾಖ ಭಾಗವಹಿಸಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ವಿಶಾಖ ಪತಿ ಅಜಯ್ ಅಲ್ಲಿ ನೆರೆದಿದ್ದ ಇತರ ಅತಿಥಿಗಳ ಜೊತೆ ಮತ್ತು ತನ್ನ ಜೊತೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಆದರೆ ಅದಕ್ಕೆ ಆಕೆ ನಿರಾಕರಿಸಿದ್ದಾಳೆ.
ಇದರಿಂದ ಕುಪಿತಗೊಂಡ ಅಜಯ್ ಆಕೆಯನ್ನು ಮೇಲ್ಚಾವಣಿ ಮೇಲಿಂದ ಎಸೆದಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಅಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ.