ತೆಲಂಗಾಣದಲ್ಲಿ ಮದುವೆ ಲಾರಿ ಅಪಘಾತ, ಮದುಮಗ ಸೇರಿ ನಾಲ್ವರು ಸಾವು

ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮೋತ ಗ್ರಾಮದ ಬಳಿ ಮದುವೆ ದಿಬ್ಬಣದ ಲಾರಿಗೆ ಸ್ಟೇಷನರಿ ವ್ಯಾನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಸೂರ್ಯಪೇಟ: ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮೋತ ಗ್ರಾಮದ ಬಳಿ ಮದುವೆ ದಿಬ್ಬಣದ ಲಾರಿಗೆ ಸ್ಟೇಷನರಿ ವ್ಯಾನ್ ವೊಂದು ಡಿಕ್ಕಿ ಹೊಡೆದ ಪರಿಣಾಮ ವರ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಮದುವೆ ಲಾರಿಯಲ್ಲಿದ್ದ ಶೇಷ ಸಾಯಿನಾಥ್, ಸತ್ಯನಾರಾಯಣ್, ದಾಮೋದರ್, ಅಖಿಲ್ ಮೃತಪಟ್ಟ ದುರ್ದೈವಿಗಳಾಗಿದ್ದು, ಗಾಯಾಳುಗಳ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸೂರ್ಯಪೇಟ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರೆಲ್ಲರು ಹೈದರಾಬಾದ್​ನ​ ಕುಕ್ಕಟಪಲ್ಲಿ ನಿವಾಸಿಗಳು ಎಂದು ತಿಳಿದುಬಂದಿದ್ದು, ಕೊತ್ತಗೂಡಂ ಜಿಲ್ಲೆ ಚರ್ಲಗೆ ಮದುವೆಗೆ ಹೊರಟಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com