ರೊಹ್ಟಕ್ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ; ಗರ್ಭಪಾತಕ್ಕೆ ನ್ಯಾಯಾಲಯ ಅನುಮತಿ

ಹರಿಯಾಣ ರಾಜ್ಯದ ರೊಹ್ಟಕ್ ನಲ್ಲಿ ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ಭಪಾತಕ್ಕೆ ನ್ಯಾಯಾಲಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರೊಹ್ಟಕ್; ಹರಿಯಾಣ ರಾಜ್ಯದ ರೊಹ್ಟಕ್ ನಲ್ಲಿ ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ  10 ವರ್ಷದ ಬಾಲಕಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ಭಪಾತಕ್ಕೆ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ. 
ಕುಟುಂಬದಲ್ಲಿ ಆರ್ಥಿಕ ಸಮಸ್ಯೆಯಿದ್ದು, ಈಗಾಗಲೇ ಮನೆಯಲ್ಲಿ ನಾಲ್ಕು ಮಕ್ಕಳಿದ್ದಾರೆ. ಹುಟ್ಟುವ ಮಗುವನ್ನು ಬೆಳೆಸಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಬಾಲಕಿಯ ತಾಯಿ ಕೆಲ ದಿನಗಳ ಹಿಂದಷ್ಟೇ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ದರು. 
ಇದರಂತೆ ಇಂದು ಅರ್ಜಿಯನ್ನು ಪರಿಶೀಲನೆ ನಡೆಸಿರುವ ನ್ಯಾಯಾಲಯ ವಿಚಾರಣೆ ನಡೆಸಿದ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಿದೆ ಎಂದು ತಿಳಿದುಬಂದಿದೆ. 
ಬಾಲಕಿಗೆ ಪರಿಶೀಲನೆ ನಡೆಸಿ ನಂತರ ಗರ್ಭಪಾತ ಮಾಡುವಂತೆ ವೈದ್ಯಕೀಯ ಮಂಡಳಿಗೆ ನ್ಯಾಯಾಲಯ ಸೂಚನೆ ನೀಡಿದೆ. ವೈದ್ಯರು ಯಾವಾಗ ಗರ್ಭಪಾತ ಮಾಡುತ್ತಾರೆಂಬುದು ಖಚಿತವಾಗಿಲ್ಲ ಎಂದು ಪ್ರಕರಣದ ತನಿಖಾಧಿಕಾರಿ ಗರೀಮಾ ದೇವಿಯವರು ಹೇಳಿದ್ದಾರೆ. 
ಬಾಲಕಿಯ ಮಲತಂದೆಯೇ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಮಾಡುವ ಮೂಲಕ ಆಕೆ ಗರ್ಭ ಧರಿಸುವಂತೆ ಮಾಡಿದ್ದ, ಕೆಲ ದಿನಗಳ ಹಿಂದಷ್ಟೇ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಆಕೆಯ ತಾಯಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾಗ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com