ದುರ್ಬಲ ವ್ಯವಸ್ಥೆ ಅಂತ್ಯವಾಗಬೇಕು, ಉತ್ತಮ ಆಡಳಿತಗಾರರಿಗೆ ಮನ್ನಣೆ ನೀಡಬೇಕು: ರಜನಿಕಾಂತ್

ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಗಳೊಂದಿಗಿನ ಸಭೆ ಶುಕ್ರವಾರವೂ ಮುಂದುವರೆದಿದ್ದು, ತಮ್ಮ ರಾಜಕೀಯ ಸೇರ್ಪಡೆ ಕುರಿತಂತೆ ರಜನಿಕಾಂತ್ ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ರಜನಿಕಾಂತ್ ಅಭಿಮಾನಿಗಳ ಸಭೆ
ರಜನಿಕಾಂತ್ ಅಭಿಮಾನಿಗಳ ಸಭೆ
Updated on: 

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಗಳೊಂದಿಗಿನ ಸಭೆ ಶುಕ್ರವಾರವೂ ಮುಂದುವರೆದಿದ್ದು, ತಮ್ಮ ರಾಜಕೀಯ ಸೇರ್ಪಡೆ ಕುರಿತಂತೆ ರಜನಿಕಾಂತ್ ಮತ್ತೊಂದು ಅಚ್ಚರಿ ಹೇಳಿಕೆ  ನೀಡಿದ್ದಾರೆ.

ಇಂದು ಚೆನ್ನೈನಲ್ಲಿ ನಡೆದ ಅಭಿಮಾನಿಗಳ ಸಭೆಯಲ್ಲಿ ಪ್ರಸಕ್ತ ತಮಿಳುನಾಡು ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ ರಜನಿಕಾಂತ್ ಅವರು, ದುರ್ಬಲ ವ್ಯವಸ್ಥೆ ಅಂತ್ಯಗೊಳ್ಳಬೇಕಿದೆ ಎಂದು ಹೇಳಿದ್ದಾರೆ. ಈ ಹಿಂದೆ ಬಿಜೆಪಿ  ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ತಮಿಳುನಾಡು ರಾಜಕೀಯದ ದುರಂತ ಎಂಬ ಹೇಳಿಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ರಜನಿಕಾಂತ್ ರಾಜ್ಯದಲ್ಲಿ ದುರ್ಬಲ ವ್ಯವಸ್ಥೆ  ಅಂತ್ಯಗೊಳ್ಳಬೇಕಿದೆ. ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ನಿಮ್ಮೊಂದಿಗೆ ನನಗೂ ಕೂಡ ಜವಾಬ್ದಾರಿ ಇದೆ. ರಾಜ್ಯದಲ್ಲಿ ಉತ್ತಮ ಆಡಳಿತಗಾರರಿದ್ದಾರೆ. ಆದರೆ ಪ್ರಸ್ತುತ ದುರ್ಬಲ ವ್ಯವಸ್ಥೆ ಅವರಿಗೆ ಅವಕಾಶ ನೀಡುತ್ತಿಲ್ಲ ಎಂದು  ಹೇಳುವ ಮೂಲಕ ಪರೋಕ್ಷವಾಗಿ ಎಐಎಡಿಎಂಕೆ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇದೇ ವೇಳೆ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್, ಅನ್ಬುಮಣಿ ರಾಮ್ ದಾಸ್ ಅವರ ಹೆಸರು ಉಲ್ಲೇಖಿಸಿದ ರಜನಿಕಾಂತ್, ಸ್ಟಾಲಿನ್ ಉತ್ತಮ ಅನುಭವ ಹೊಂದಿದ್ದಾರೆ. ರಾಮ್ ದಾಸ್ ಅವರು ವಿಶ್ವಾದ್ಯಂತ ಪ್ರವಾಸ ಮಾಡಿದ್ದಾರೆ.ಯ  ಇಂತಹ ಅನುಭವಿಗಳನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು. ಆ ಮೂಲಕ ನೇರವಾಗಿಯೇ ಡಿಎಂಕೆ ಪಕ್ಷದ ಪರ ರಜನಿಕಾಂತ್ ಬ್ಯಾಟ್ ಬೀಸಿದ್ದಾರೆ.

ನಾನು ಅಪ್ಪಟ ತಮಿಳಿಗ

ಇದೇ ವೇಳೆ ರಜನಿಕಾಂತ್  ಬೇರೆ ರಾಜ್ಯದವರು ಎಂಬ ಟೀಕೆಗೆ ಸಂಬಂಧಿಸಿದಂತೆ ಮಾತನಾಡಿದ ಸೂಪರ್ ಸ್ಟಾರ್, "ನಾನು ಕರ್ನಾಟಕದಿಂದ ಇಲ್ಲಿಗೆ ಬಂದವನಾದರೂ ನನಗೆ ಅಭೂತಪೂರ್ವ ಸ್ವಾಗತ ನೀಡಿ ಬರಮಾಡಿಕೊಂಡಿದ್ದೀರಿ. ಅಭಿಮಾನದಿಂದ ನನ್ನನ್ನು ಸಂಪೂರ್ಣವಾಗಿ ನಿಜವಾದ ತಮಿಳಿಗನನ್ನಾಗಿ ಮಾಡಿದ್ದೀರಿ. ನಾನು 23 ವರ್ಷ ಕರ್ನಾಟಕದಲ್ಲಿ ನೆಲೆಸಿದ್ದೆ. 43 ವರ್ಷದಿಂದ ತಮಿಳುನಾಡಿನಲ್ಲಿ ಬದುಕುತ್ತಿದ್ದೇನೆ. ನಾನೀನ ಪಕ್ಕಾ ತಮಿಳಿಗ. ಇಲ್ಲಿಯ ರಾಜಕೀಯ ವ್ಯವಸ್ಥೆ ಅಧಃಪತನಗೊಂಡಿದೆ. ರಾಜಕೀಯದಲ್ಲಿ ಸುಧಾರಣೆ ತರಬೇಕಿದೆ' ಎಂದು ರಜನಿ ಭಾವೋದ್ವೇಗವಾಗಿ ಮಾತನಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com