ಮೇ 29ಕ್ಕೆ ಐಸಿಎಸ್ ಇ 10 ಮತ್ತು ಐಎಸ್ ಸಿ 12ನೇ ತರಗತಿ ಫಲಿತಾಂಶ ಪ್ರಕಟ

ಐಸಿಎಸ್ ಇ ಹತ್ತನೇ ತರಗತಿ ಮತ್ತು ಐಎಸ್ ಸಿ 12ನೇ ತರಗತಿಯ ಫಲಿತಾಂಶ ಇದೇ 29ರಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಐಸಿಎಸ್ ಇ ಹತ್ತನೇ ತರಗತಿ ಮತ್ತು ಐಎಸ್ ಸಿ 12ನೇ ತರಗತಿಯ ಫಲಿತಾಂಶ ಇದೇ 29ರಂದು ಪ್ರಕಟಗೊಳ್ಳಲಿದೆ.
ಪರೀಕ್ಷೆ ನಡೆಸುವ ಭಾರತೀಯ ಶಾಲಾ ಪರೀಕ್ಷಾ ಪ್ರಮಾಣಪತ್ರ ಮಂಡಳಿ ಡಿಜಿ ಲಾಕರ್ ಸೌಲಭ್ಯವನ್ನು ಜಾರಿಗೆ ತರುತ್ತಿದ್ದು ಈ ಮೂಲಕ ಡಿಜಿಟಲಿ ಸಹಿ ಪ್ರಮಾಣಪತ್ರಗಳು ಮತ್ತು ಅಂಕಪಟ್ಟಿಗಳನ್ನು ಇದು ಸಂಗ್ರಹಿಸಿಡುತ್ತದೆ.
ಅಂಕಗಳನ್ನು ಮರು ಪರೀಕ್ಷೆ ನಡೆಸುವ ಅವಕಾಶವನ್ನು ಕೂಡ ಮಂಡಳಿ ಕಲ್ಪಿಸುತ್ತದೆ.
ಮೇ 29ರಂದು ಅಪರಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಸಿಐಎಸ್ ಇಸಿಯ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರತೂನ್ ತಿಳಿಸಿದ್ದಾರೆ.
ಮಂಡಳಿಯ ಕೆರಿಯರ್ ಪೋರ್ಟಲ್ ಮತ್ತು ಅದರ ವೆಬ್ ಸೈಟ್ ನಲ್ಲಿ ಫಲಿತಾಂಶ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಮತ್ತು ಎಸ್ ಎಂಎಸ್ ಮೂಲಕ ಕೂಡ ಸಿಗುತ್ತದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿದುಕೊಳ್ಳಲು ಐಸಿಎಸ್ ಇ ಅಥವಾ ಐಎಸ್ ಸಿ ಎಂದು ಟೈಪ್ ಮಾಡಿ ತಮ್ಮ ಏಳು ಸಂಖ್ಯೆಯ ಐಡಿ ಕೋಡ್ ನ್ನು 09248082883ಕ್ಕೆ ಕಳುಹಿಸಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com