ಒಳನುಸುಳಲು ಪ್ರಯತ್ನಿಸಿದ 6 ಪಾಕ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ!

ಇಂಡೋ-ಪಾಕ್ ಗಡಿಯಲ್ಲಿ ಅಕ್ರಮವಾಗಿ ಒಳ ನುಸುಳುತ್ತಿದ್ದ ನಾಲ್ಕು ಮಂದಿ ಭಯೋತ್ಪಾದಕರನ್ನು ಭಾರತೀಯ ಸೇನೆಯ ಯೋಧರು ಶನಿವಾರ ಗಡಿಯಲ್ಲೇ ಹೊಡೆದುರುಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಶ್ರೀನಗರ: ಇಂಡೋ-ಪಾಕ್ ಗಡಿಯಲ್ಲಿ ಅಕ್ರಮವಾಗಿ ಒಳ ನುಸುಳುತ್ತಿದ್ದ 6 ಮಂದಿ ಭಯೋತ್ಪಾದಕರನ್ನು ಭಾರತೀಯ ಸೇನೆಯ ಯೋಧರು ಶನಿವಾರ ಗಡಿಯಲ್ಲೇ ಹೊಡೆದುರುಳಿಸಿದ್ದಾರೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ರಾಮ್ ಪುರ ಸೆಕ್ಟರ್ ನಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆ ನಡೆದಿದ್ದು, ಈ ವರೆಗೂ ಸುಮಾರು 6 ಮಂದಿ ಉಗ್ರರನ್ನು ಹೊಡೆದು ಉರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ. ರಾಮ್  ಪುರ ಸೆಕ್ಟರ್ ನಲ್ಲಿ ಇನ್ನೂ ಗುಂಡಿನ ಚಕಮಕಿ ಮುಂದುವರೆದಿದ್ದು, ಮತ್ತಷ್ಟು ಉಗ್ರರು ಅವಿತಿರುವ ಶಂಕೆ ವ್ಯಕ್ತವಾಗುತ್ತಿದೆ.

ಸೇನಾಧಿಕಾರಿಗಳು ಹೇಳಿರುವಂತೆ ಇನ್ನೂ ಇಬ್ಬರು ಅಥವಾ ಮೂವರು ಉಗ್ರರು ಅವಿತಿರುವ ಸಾಧ್ಯತೆ ಇದ್ದು, ಉಗ್ರರನ್ನು ಸೇನೆ ಸುತ್ತುವರೆದಿದೆ. ಕಾರ್ಯಾಚರಣೆ ನಡೆಯುತ್ತಿದ್ದು, ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ  ಎಂದು ಹೇಳಿದ್ದಾರೆ.

ಟ್ರಾಲ್ ನಲ್ಲೂ ಮುಂದುವರೆದ ಗುಂಡಿನ ಚಕಮಕಿ

ಏತನ್ಮಧ್ಯೆ ಜಮ್ಮುವಿನ ಸೈಮುಟ್ರಾಲ್ ನಲ್ಲೂ ಉಗ್ರರು ದಾಳಿ ನಡೆಸಿದ್ದು, ಕನಿಷ್ಠ ಇಬ್ಬರು ಉಗ್ರರು ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಉಗ್ರರ ದಾಳಿಗೆ ಭಾರತೀಯ ಸೇನಾ ಯೋಧರು ತಕ್ಕ ಪ್ರತ್ಯುತ್ತರ  ನೀಡುತ್ತಿದ್ದು, ಘಟನಾ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com