ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿರುವ ಮುಕುಲ್ ರಾಯ್, "ಒಂದು ರಾಜಕೀಯ ಪಕ್ಷ ನಿರ್ದಿಷ್ಟ ತತ್ವಗಳನ್ನು ಹೊಂದಿರಬೇಕಾಗುತ್ತದೆ, ಕೆಲವೊಮ್ಮೆ ತೃಣಮೂಲ ಕಾಂಗ್ರೆಸ್ ಬಿಜೆಪಿಯೊಂದಿಗೆ ಇರುತ್ತದೆ, ಮತ್ತೆ ಕೆಲವೊಮ್ಮೆ ಕಾಂಗ್ರೆಸ್ ನೊಂದಿಗೆ ಇರುತ್ತದೆ. ತೃಣಮೂಲ ಕಾಂಗ್ರೆಸ್ ಎನ್ ಡಿಎ ಸರ್ಕಾರದೊಂದಿಗೆ ಗುರುತಿಸಿಕೊಂಡು ಬಿಜೆಪಿಯೊಂದಿಗೆ ಕೈ ಜೋಡಿಸಿತ್ತು. ಆದರೆ ಈಗ ಕಾಂಗ್ರೆಸ್ ಇಲ್ಲದೇ ದೇಶ ಮುನ್ನಡೆಯುವುದೇ ಇಲ್ಲ ಎಂದು ಭಾವಿಸುತ್ತಿದೆ. ಈ ಸಂಗತಿಗಳೇ ನನ್ನನ್ನು ಪಕ್ಷ ತೊರೆಯುವಂತೆ ಮಾಡಿತ್ತು" ಎಂದು ಹೇಳಿದ್ದಾರೆ.