ಇದೇ ವೇಳೆ ಕಾನೂನು ಮೀರಿದವರಿಗೆ ನೋಟಿಸ್ ನೀಡಲಾಗಿದೆ ಎಂಬ ದೆಹಲಿ ಸರ್ಕಾರದವನ್ನೂ ತರಾಟೆಗೆ ತೆಗೆದುಕೊಂಡ ಎನ್ ಜಿಟಿ, ಕಾನೂನು ಮೀರಿದವಿರೆಗೆ ಸಾಕಷ್ಟು ಬಾರಿ ನೋಟಿಸ್ ಜಾರಿ ಮಾಡಲಾಗಿದೆಯಷ್ಟೇ..ಆದರೆ ಕ್ರಮ ಕೈಗೊಂಡಿಲ್ಲ. ನಿನ್ನೆ ದೆಹಲಿಯಲ್ಲಿ 100ರಷ್ಟಿರಬೇಕಿದ್ದ ಪಿಎಂ 10 ಪ್ರಮಾಣ 986ಕ್ಕೇರಿದೆ. 60ರಷ್ಟಿರಬೇಕಿದ್ದ ಪಿಎಂ 2.5 ಪ್ರಮಾಣ 420ಕ್ಕೆ ಏರಿಕೆಯಾಗಿದೆ. ದೆಹಲಿಯ ಪ್ರತಿಯೊಬ್ಬ ನಾಗರೀಕನಿಗೂ ಸುರಕ್ಷಿತ ಮತ್ತು ಜೀವಿಸಲು ಯೋಗ್ಯವಾದ ವಾತಾವರಣದಲ್ಲಿ ಜೀವಿಸುವ ಹಕ್ಕಿದೆ. ಇದನ್ನು ಸರ್ಕಾರ ತನ್ನ ನಿರ್ಲಕ್ಷ್ಯದಿಂದ ಕಸಿಯುವ ಹಾಗಿಲ್ಲ. ನಗರದ ಎಲ್ಲ ಮಾಲೀನ್ಯ ನಿಯಂತ್ರಣ ಮಂಡಳಿಗಳೂ ಮಾಲೀನ್ಯ ತಡೆಯುವಲ್ಲಿ ವಿಫಲವಾಗಿದ್ದು, ಇದಕ್ಕೆ ಪ್ರಸ್ತುತ ಪರಿಸ್ಥಿತಿಯೇ ಸಾಕ್ಷಿ. ಬಹಿರಂಗವಾಗಿಯೇ ದೆಹಲಿಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ಇದನ್ನೂ ಯಾರೂ ತಡೆಯುತ್ತಿಲ್ಲ. ರಸ್ತೆಗಳಲ್ಲಿ ರಾಜಾರೋಷವಾಗಿ ವಿಷಾನಿಲ ಉಗುಳುತ್ತಾ ವಾಹನಗಳು ಚಲಿಸುತ್ತಿದ್ದರೂ ಇದನ್ನೂ ಯಾರೂ ಪ್ರಶ್ನಿಸುತ್ತಿಲ್ಲ. ಹೀಗಿರುವಾಗ ಪರಿಸ್ಥಿತಿ ಹೇಗೆ ಸುಧಾರಿಸುತ್ತದೆ. ಇದೇ ಮುಂದುವರಿದರೆ ಮುಂದಿನ ಪೀಳಿಗೆಗೆ ದೆಹಲಿ ಎಂಬುದು ಇತಿಹಾಸದ ಪುಟವಾಗುತ್ತದೆ ಎಂದೂ ಎನ್ ಜಿಚಿ ಎಚ್ಚರಿಕೆ ನೀಡಿದೆ.