ಮುಂಬೈ: ಸಿನಿಮಾವನ್ನು ನಾನು ಸಿನಿಮಾವಾಗಿಯೇ ನೋಡುತ್ತೇನೆ ಎಂದು ಪದ್ಮಾವತಿ ಚಿತ್ರ ವಿವಾದ ಕುರಿತಂತೆ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಭಾನುವಾರ ಹೇಳಿದ್ದಾರೆ.
ಪದ್ಮಾವತಿ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಹಲವೆಡೆ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸಿನಿಮಾವನ್ನು ನಾನು ಸಿನಿಮಾವಾಗಿಯೇ ನೋಡುತ್ತೇನೆ. ಅದರ ಇತಿಹಾಸವಾಗಲೀ ಅಥವಾ ಭೂಗೋಳ ಕುರಿತಂತಾಗಲೀ ಆಳಕ್ಕೆ ಇಳಿದು ನೋಡುವುದಿಲ್ಲ ಎಂದು ಹೇಳಿದ್ದಾರೆ.
ನಾನು ಚಿತ್ರಕ್ಕೆ ಬೆಂಬಲವನ್ನಾಗಲೀ ಅಥವಾ ವಿರೋಧವನ್ನಾಗಲೀ ವ್ಯಕ್ತಪಡಿಸುವುದಿಲ್ಲ. ಸಿನಿಮಾದಲ್ಲಿ ಇಷ್ಟವಾಗುವುದನ್ನು ಒಪ್ಪಿಕೊಳ್ಳಬೇಕು. ಇಲ್ಲದೇ ಇರುವುದನ್ನು ಬಿಟ್ಟುಬಿಡಬೇಕು ಎಂದು ತಿಳಿಸಿದ್ದಾರೆ.