ಈಗ್ಗೆ 10 ದಿನಗಳ ಹಿಂದಷ್ಟೇ ವೈದ್ಯನೋರ್ವನ ಸೆಕ್ಸ್ ಸಿಡಿ ಬಹಿರಂಗವಾಗಿದ್ದಾಗ ಹಾರ್ದಿಕ್ ಪಟೇಲ್, ಇದರಲ್ಲಿ ಅಚ್ಚರಿ ಏನಿಲ್ಲ, ಮುಂದೊಂದು ದಿನ ತಮ್ಮ ಸೆಕ್ಸ್ ವಿಡಿಯೋಗಳನ್ನೂ ಕೂಡ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಹಾರ್ದಿಕ್ ಪಟೇಲ್ ಅಸಭ್ಯವಾಗಿ ಕಾಣಿಸಿಕೊಂಡಿರುವ ವಿಡಿಯೋ ಇದೀಗ ಬಿಡುಗಡೆಯಾಗಿದೆ. ಇನ್ನು ಹಾರ್ದಿಕ್ ಮಾತ್ರವಲ್ಲದೇ ಮೀಸಲಾತಿ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಹಲವರ ಸೆಕ್ಸ್ ಸಿಡಿ ನನ್ನ ಬಳಿ ಇದೆ ಎಂದು ಸಿಡಿ ಬಿಡುಗಡೆ ಮಾಡಿರುವ ಯುವಕ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.