ಅಪ್ಪುಗೆಯ ತಂತ್ರ ವಿಫಲ, ಮತ್ತಷ್ಟು ಅಪ್ಪುಗೆ ಕೂಡಲೇ ಬೇಕಿವೆ: ಹಫೀಜ್ ಬಿಡುಗಡೆ ಕುರಿತು ರಾಹುಲ್ ವ್ಯಂಗ್ಯ

ಪಾಕಿಸ್ತಾನದಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಿಡುಗಡೆಯಾಗಿದ್ದು, ಈ ಮೂಲಕ ಅಪ್ಪುಗೆಯ ತಂತ್ರ...
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on: 
ನವದೆಹಲಿ: ಪಾಕಿಸ್ತಾನದಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಿಡುಗಡೆಯಾಗಿದ್ದು ಈ ಮೂಲಕ ಅಪ್ಪುಗೆಯ ತಂತ್ರ ವಿಫಲವಾಗಿದೆ. ಮತ್ತಷ್ಟು ಅಪ್ಪು ಕೂಡಲೇ ಬೇಕಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಶನಿವಾರ ಲೇವಡಿ ಮಾಡಿದ್ದಾರೆ. 
ಪಾಕಿಸ್ತಾನದಲ್ಲಿ ಗೃಹ ಬಂಧನಕ್ಕೊಳಗಾಗಿದ್ದ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಬಿಡುಗಡೆಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರ ಕುರಿತು ವ್ಯಂಗ್ಯವಾಡಿದ್ದಾರೆ. 
ನರೇಂದ್ರ ಭಾಯ್...ಮಾತು ಫಲ ಕೊಡಲಿಲ್ಲ. ಭಯೋತ್ಪಾದನೆಯ ಮಾಸ್ಟರ್ ಮೈಂಡ್ ಬಿಡುಗಡೆಯಾಗಿದ್ದಾನೆ. ಲಷ್ಕರ್-ಇ-ತೊಯ್ಬಾದಿಂದ ಪಾಕಿಸ್ತಾನ ಸೇನೆಗೆ ಹಣ ಹೂಡಿಕೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಳ್ಳಿಹಾಕಿದ್ದಾರೆ. ಹಗ್'ಪ್ಲೊಮಸಿ (ಅಪ್ಪುಗೆಯ ರಾಜತಂತ್ರ) ವಿಫಲವಾಗಿದೆ. ಇನ್ನು ಹಲವು ಅಪ್ಪುಗೆಗಳು ಕೂಡಲೇ ಬೇಕಿವೆ ಎಂದು ಟ್ವಿಟರ್ ನಲ್ಲಿ ಲೇವಡಿ ಮಾಡಿದ್ದಾರೆ.
ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಕಾಯ್ದೆ ಅಡಿಯಲ್ಲಿ ಕೆಲ ತಿಂಗಳ ಹಿಂದೆ ಹಫೀಜ್ ನನ್ನು ಬಂಧನಕ್ಕೊಳಪಡಿಸಲಾಗಿತ್ತು. ಜ.31ರಿಂದಲೂ ಹಫೀಜ್ ನನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಗೃಹ ಬಂಧನದಲ್ಲಿರಿಸಿದ್ದ ಪಾಕಿಸ್ತಾನ ಸರ್ಕಾರ ಹಫೀಜ್ ವಿರುದ್ದ ಯಾವುದೇ ರೀತಿಯ ಸಾಕ್ಷ್ಟಾಧಾರಗಳನ್ನು ಒದಗಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಸಾಕ್ಷ್ಯಾಧಾರ ಒದಗಿಸಿ, ಇಲ್ಲವೇ ಹಫೀಜ್ ನನ್ನು ಬಂಧನ ಮುಕ್ತನನ್ನಾಗಿ ಮಾಡಲಾಗುತ್ತದೆ ಎಂದು ಸೂಚಿಸಿ, ಪಾಕಿಸ್ತಾನ ಸರ್ಕಾರಕ್ಕೆ ಕಾಲಾವಕಾಶವನ್ನು ನೀಡಿತ್ತು. 
ಹಫೀಜ್ ವಿರುದ್ಧ ಸಾಕ್ಷ್ಯಾಧಾರ ಒದಗಿಸುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಹಫೀಜ್ ನಿನ್ನೆ ಬಂಧನ ಮುಕ್ತನಾಗಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com