ಐಸಿಎಐ ಅಧ್ಯಕ್ಷ ನಿಲೇಶ್ ವಿಕಾಮ್ಸೆ ಪುತ್ರಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ

ಐಸಿಎಐ ಅಧ್ಯಕ್ಷ ನಿಲೇಶ್ ವಿಕಾಮ್ಸೆ ಅವರ ಪುತ್ರಿ 21 ವರ್ಷದ ಪಲ್ಲವಿ ವಿಕಾಮ್ಸೆ ಅವರ ದೇಹ ಮುಂಬಯಿನ ಉಪನಗರ ರೈಲ್ವೆ ಹಳಿಯ ಮೇಲೆ ...
ಪಲ್ಲವಿ ವಿಕಾಮ್ಸೆ
ಪಲ್ಲವಿ ವಿಕಾಮ್ಸೆ
ಮುಂಬಯಿ: ಐಸಿಎಐ ಅಧ್ಯಕ್ಷ ನಿಲೇಶ್ ವಿಕಾಮ್ಸೆ ಅವರ ಪುತ್ರಿ 21 ವರ್ಷದ ಪಲ್ಲವಿ ವಿಕಾಮ್ಸೆ ಅವರ ದೇಹ ಮುಂಬಯಿನ ಉಪನಗರ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ.
ಮುಂಬೈನ ಪರೇಲ್ ಮತ್ತು ಕರ್ರಿ ರೈಲು ನಿಲ್ದಾಣದದಲ್ಲಿ ಪತ್ತೆಯಾಗಿದ್ದ ಮೃತದೇಹವನ್ನು  ಅಧ್ಯಕ್ಷ ನಿಲೇಶ್ ವಿಕಾಮ್ಸೆ ಅವರ ಪುತ್ರಿ ಪಲ್ಲವಿ ವಿಕಾಮ್ಸೆ ಎಂದು ಗುರುತಿಸಲಾಗಿದೆ ಎಂದು ಡಿಎನ್ ಎ ವರದಿ ಮಾಡಿದೆ.
ಕಾನೂನು ವಿದ್ಯಾರ್ಥಿಯಾಗಿದ್ದ  ಪಲ್ಲವಿ ದಕ್ಷಿಣ ಮುಂಬೈನ ಕಂಪನಿಯೊಂದರಲ್ಲಿ ಇಂಟರ್ನ್​ಶಿಪ್​ಮಾಡುತ್ತಿದ್ದರು. ಕಚೇರಿಯಿಂದ ಸಂಜೆ 5 ಗಂಟೆಗೆ ಹೊರಟ ಪಲ್ಲವಿ ರಾತ್ರಿ 10.30 ಆದರೂ ಮನೆ ತಲುಪಿರಲಿಲ್ಲ, ಹೀಗಾಗಿ ರಾತ್ರಿ 10.30ಕ್ಕೆ ದೂರು ದಾಖಲಿಸಲಾಗಿತ್ತು.  
ಸಂಜೆ 6.30 ರವೇಳೆಗೆ ರೈಲ್ವೆ ಹಳಿ ಮೇಲೆ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆಬಂದ ಪೊಲೀಸರು  ಪಲ್ಲವಿ ಎಂದು ಗುರುತಿಸಿದ್ದಾರೆ. ನಂತರ ಪಲ್ಲವಿಯ ಸಂಬಂಧಿಕರೂ ಕೂಡ ಅದನ್ನು ಖಚಿತ ಪಡಿಸಿದ್ದಾರೆ ಎಂದು ರೈಲ್ವೇ ಪೊಲೀಸ್​ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಪಲ್ಲವಿ ಪೋಷಕರು ಯಾರ ಮೇಲೊ ಸಂಶಯ ವ್ಯಕ್ತ ಪಡಿಸಿಲ್ಲ, ಇದೊಂದು ಆಕಸ್ಮಿಕ ಅವಘಡ ಎಂದು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com