ಗುಜರಾತ್: ಆಕಸ್ಮಿಕವಾಗಿ ಮಹಿಳಾ ಶೌಚಾಲಯ ಪ್ರವೇಶಿಸಿದ ರಾಹುಲ್ ಗಾಂಧಿ!

ಗುಜರಾತ್ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ಮತ್ತೊಂದು ಯಡವಟ್ಟು ಮಾಡಿಕೊಂದಿದ್ದು, ಗುಜರಾತಿ ಭಾಷೆಯಲ್ಲಿದ್ದ ಸೂಚನಾ ಫಲಕವನ್ನು ಓದಲು ಸಾಧ್ಯವಾಗದೇ ಆಕಸ್ಮಿಕವಾಗಿ ಮಹಿಳೆಯರ ಶೌಚಾಲಯಕ್ಕೆ ಪ್ರವೇಶಿಸಿದ್ದಾರೆ.
ಆಕಸ್ಮಿಕವಾಗಿ ಮಹಿಳಾ ಶೌಚಾಲಯಕ್ಕೆ ಪ್ರವೇಶಿಸಿದ ರಾಹುಲ್ ಗಾಂಧಿ!
ಆಕಸ್ಮಿಕವಾಗಿ ಮಹಿಳಾ ಶೌಚಾಲಯಕ್ಕೆ ಪ್ರವೇಶಿಸಿದ ರಾಹುಲ್ ಗಾಂಧಿ!
ಛೋಟಾ ಉದೇಪುರ್: ಗುಜರಾತ್ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ಮತ್ತೊಂದು ಯಡವಟ್ಟು ಮಾಡಿಕೊಂದಿದ್ದು, ಗುಜರಾತಿ ಭಾಷೆಯಲ್ಲಿದ್ದ ಸೂಚನಾ ಫಲಕವನ್ನು ಓದಲು ಸಾಧ್ಯವಾಗದೇ ಆಕಸ್ಮಿಕವಾಗಿ ಮಹಿಳೆಯರ ಶೌಚಾಲಯಕ್ಕೆ ಪ್ರವೇಶಿಸಿದ್ದಾರೆ. 
ಛೋಟಾ ಉದೇಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಂವಾದ್ ಕಾರ್ಯಕ್ರಮದಲ್ಲಿ ಯುವಕರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಗುಜರಾತಿ ಭಾಷೆಯಲ್ಲಿಯಷ್ಟೇ ಸೂಚನಾ ಫಲಕವಿತ್ತು, ಪುರುಷರು, ಮಹಿಳೆಯರಿಗಾಗಿ ಇರುವ ಶೌಚಾಲಯಗಳೆಂದು ಗುರುತಿಸುವ ಚಿಹ್ನೆಯೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಆಕಸ್ಮಿಕ ಘಟನೆ ನಡೆದಿದೆ. 
ರಾಹುಲ್ ಗಾಂಧಿ ಹೊರಬರುತ್ತಿದ್ದಂತೆಯೇ ಸ್ಥಳೀಯರು ನಗುತ್ತಿರುವುದನ್ನು ಮಾಧ್ಯಮಗಳು ಸೆರೆಹಿಡಿದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com