ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ನನ್ನ ಮಗ ಕಮಾಡಿಟಿ ಮಾರ್ಕೆಟ್ ವ್ಯವಹಾರ ನಡೆಸುತ್ತಿದ್ದಾನೆ, ಅದರಲ್ಲಿ ನಷ್ಟ ಕೂಡ ಇರುತ್ತದೆ, ಎಐಸಿಸಿ ಉಪಾಧ್ಯಕ್ಷರಿಗೆ ಸಾಲ ಮತ್ತು ಕ್ರೆಡಿಟ್ ನಡುವಿನ ವ್ಯತ್ಯಾಸ ಕೂಡ ತಿಳಿದಿಲ್ಲ, ನನ್ನ ಮಗ ಸರ್ಕಾರದೊಂದಿಗೆ ಯಾವುದೇ ಉದ್ಯಮ ನಡೆಸುತ್ತಿಲ್ಲ, ಅಥವಾ ಯಾವುದೇ ಸರ್ಕಾರಿ ಭೂಮಿ ಪಡೆದಿಲ್ಲ, ಗುತ್ತಿಗೆದಾರರ ಜೊತೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.