ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಶೋಪಿಯಾನ್ ಜಿಲ್ಲೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಶಿಕ್ಷಕನೊಬ್ಬರ ಮೃತದೇಹವೊಂದು ಬುಧವಾರ ಪತ್ತೆಯಾಗಿದೆ.
ಎಜಾಜ್ ಅಹ್ಮದ್ ಲೋನ್ ಹತ್ಯೆಯಾದ ಶಿಕ್ಷಕ. ಶೋಪಿಯಾನ್ ಜಿಲ್ಲೆಯ ಗಟಿಪೊರಾದ ನಿವಾಸಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಶಿಕ್ಷಕನ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ವಥೂ ಗ್ರಾಮದಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಹತ್ಯೆಯಾಗಿರುವ ಶಿಕ್ಷಕ ಎಜಾಜ್ ಮನೆಯಲ್ಲಿ ಅಕ್ಟೋಬರ್.9 ರಂದು ಭಾರತೀಯ ಸೇನಾ ಪಡೆ ಎನ್ ಕೌಂಟರ್ ನಡೆಸಿತ್ತು. ಈ ವೇಳೆ ಮೂವರು ಉಗ್ರರನ್ನು ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವೆಂಬಂತೆ ಉಗ್ರರು ಶಿಕ್ಷಕನ ಕತ್ತು ಸೀಳಿ ಹತ್ಯೆ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.