ಭಾನುವಾರ ಮಧ್ಯಾಹ್ನ ಗುಜರಾತ್ ನ ಭಾವ್ ನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಬಳಿಕ ಅಲ್ಲಿಂದ ಘೋಘಾಗೆ ತೆರಳಿದರು. ಅಲ್ಲಿ ಗುಜರಾತ್'ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರಾಂತಗಳಿಗೆ ಜಲ ಸಂಪರ್ಕ ಕಲ್ಪಿಸುವ ರೊರೊ ಸಮುದ್ರಯಾನ ಸೇವೆಯನ್ನು ಉದ್ಘಾಟಿಸಿದರು. ಒಟ್ಟಾರೆಯಾಗಿ ಗುಜರಾತ್ ನಲ್ಲಿ ಇಂದು ಪ್ರಧಾನಿ ಮೋದಿ ಸುಮಾರು ರು.1,140 ಕೋಟಿ ವೆಚ್ಚದ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಸೌರಾಷ್ಟ್ರದ ಭಾವಂಗರ್ ಜಿಲ್ಲೆಯ ಘೋಘ ಮತ್ತು ದಕ್ಷಿಣ ಗುಜರಾತ್ ನ ದಹೇಜ್ ಗಳ ಮಧ್ಯೆ ಸಮುದ್ರಯಾನ ಸೇವೆ ಆರಂಭವಾಗಲಿದೆ. ಸಮುದ್ರಯಾನ ಸೇವೆಯಿಂದ ನಗರಗಳ ನಡುವಣ ಪ್ರಯಾಣದ ಅವಧಿ ಹತ್ತು ಪಟ್ಟು ಕಡಿಮೆ ಆಗಲಿದೆ ಎಂದು ಮೂಲಗಳು ಹೇಳಿವೆ.