ಬ್ಲೂವೇಲ್'ಗೆ ಮತ್ತೊಂದು ಬಲಿ: ರೈಲಿಗೆ ಎದೆಯೊಡ್ಡಿ ನಿಂತು ವಿದ್ಯಾರ್ಥಿ ಸಾವು

ಅಪಾಯಕಾರಿ ಆಟ ರಷ್ಯಾ ಮೂಲದ ಬ್ಲೂವೇಲ್ ಮತ್ತೊಂದು ಅಮಾಯಕ ವಿದ್ಯಾರ್ಥಿಯನ್ನು ಬಲಿಪಡೆದುಕೊಂಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದಮೋಹ್: ಅಪಾಯಕಾರಿ ಆಟ ರಷ್ಯಾ ಮೂಲದ ಬ್ಲೂವೇಲ್ ಮತ್ತೊಂದು ಅಮಾಯಕ ವಿದ್ಯಾರ್ಥಿಯನ್ನು ಬಲಿಪಡೆದುಕೊಂಡಿದೆ. 
ಬ್ಲೂವೇಲ್ ಪಾಶಕ್ಕೆ ಸಿಕ್ಕ ಹಲವು ವಿದ್ಯಾರ್ಥಿಗಳು ಕಟ್ಟಡದಿಂದ ಕೆಳಗೆ ಹಾರಿ ಇಲ್ಲವೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೆ, ಇದೇ ಮೊದಲ ಬಾರಿಗೆ ವಿದ್ಯಾರ್ಥಿಯೊಬ್ಬ ಚಲಿಸುವ ರೈಲಿಗೆ ಎದೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ದಮೋಹ್'ನಲ್ಲಿ ನಡೆದಿದೆ. ಈ ಮೂಲಕ ಮಾರಣಾಂತಿಕ ಆಟದ ಮತ್ತಷ್ಟು ಕರಾಳ ಮುಖ ಬೆಳಕಿಗೆ ಬಂದಂತಾಗಿದೆ. 
ಕೆಲವು ದಿನಗಳಿಂದ ಬ್ಲೂವೇಲ್ ಆಟದ ಬಗ್ಗೆ ಪ್ರೇರೇಪಿತನಾಗಿದ್ದ ಫುಟೇರಾ ಮೂಲದ 12ನೇ ತರಗತಿ ಬಾಲಕ ಸಾತ್ವಿಕ್ ಪಾಂಡೆ, ಶನಿವಾರ ರಾತ್ರಿ ಬೈಕ್ ಅನ್ನು ರೈಲ್ವೇ ಕ್ರಾಸಿಂಗ್ ನಲ್ಲಿ ಪಾರ್ಕ್ ಮಾಡಿ, ರೈಲ್ವೇ ಹಳಿಯತ್ತ ತೆರಳಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾನೆ. ಈ ದೃಶ್ಯಾವಳಿಗಳು ಇಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ನಿನ್ನೆ ಬೆಳಿಗ್ಗೆ ರೈಲ್ವೇ ಹಳಿಯ ಮೇಲೆ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ವಿದ್ಯಾರ್ಥಿಯ ಗೆಳೆಯರು ಪ್ರತಿಕ್ರಿಯೆ ನೀಡಿದ್ದು, ಸಾತ್ವಿಕ್ ಪಾಂಡೆ ಯಾವಾಗಲೂ ಬ್ಲೂವೇಲ್ ಗೇಮ್ ಆಡುತ್ತಿದ್ದ. ಅಲ್ಲದೆ. ನಮ್ಮನ್ನೂ ಆಟವಾಡುವಂತೆ ತಿಳಿಸುತ್ತಿದ್ದ ಎಂದಿದ್ದಾರೆ. ಪ್ರಕರಣ ಸಂಬಂಧ ಸಾತ್ವಿಕ್ ಕುಟುಂಬಸ್ಥರು ಯಾವುದೇ ಪ್ರತಿಕ್ರಿಯೆಗಳನ್ನು  ನೀಡಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com