13 ವರ್ಷ ದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಅವಕಾಶ ನಿಡಿದ ಸು.ಕೋರ್ಟ್
ವೈದ್ಯಕೀಯ ವರದಿಯೊಂದನ್ನು ಪರಿಗಣನೆಗೆ ತೆಗೆದುಕೊಂದ ಬಳಿಕ 13 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ತನ್ನ 32 ವಾರಗಳ ಭ್ರೂಣವನ್ನು ಗರ್ಭಪಾತದಿಂದ ತೆಗೆಸಲು ಸುಪ್ರೀಂ ಕೋರ್ಟ್ ಇಂದು ಅನುಮತಿ ನೀಡಿದೆ.
13 ವರ್ಷ ದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಅವಕಾಶ ನಿಡಿದ ಸು.ಕೋರ್ಟ್
ನವದೆಹಲಿ: ವೈದ್ಯಕೀಯ ವರದಿಯೊಂದನ್ನು ಪರಿಗಣನೆಗೆ ತೆಗೆದುಕೊಂದ ಬಳಿಕ 13 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ತನ್ನ 32 ವಾರಗಳ ಭ್ರೂಣವನ್ನು ಗರ್ಭಪಾತದಿಂದ ತೆಗೆಸಲು ಸುಪ್ರೀಂ ಕೋರ್ಟ್ ಇಂದು ಅನುಮತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಅಮಿತಾ ರಾಯ್ ಮತ್ತು ಎ.ಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ಪೀಠವು ಮುಂಬೈ ಜೆ ಜೆ ಆಸ್ಪತ್ರೆಯ ವೈದ್ಯರ ತಂದದಿಂದ ಸಲ್ಲಿಸಲ್ಪಟ್ಟ ವೈದ್ಯಕೀಯ ವರದಿಯನ್ನು ಪರಿಗಣಿಸಿಗರ್ಭಪಾತಕ್ಕೆ ಅನುಮತಿ ನೀಡಿದೆ.
ಸೆಪ್ಟೆಂಬರ್ 8 ರಂದು ಗರ್ಭಪಾತ ಆಪರೇಷನ್ ನಡೆಸುವಂತೆ ಆಸ್ಪತ್ರೆ ಸಿಬ್ಬಂದಿಗಳಿಗೆ ಸುಪ್ರೀಂ ಕೋರ್ಟ್ ಕೇಳಿದೆ. "ಒಂದು ದಿನ ಮುಂಚಿತವಾಗಿ ಆ ಹುಡುಗಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಬೇಕು" ಎಂದು ಅದು ಹೇಳಿದೆ.
ಮುಂಬೈ ಮೂಲದ ಅತ್ಯಾಚಾರ ಸಂತ್ರಸ್ತ ಬಾಲಕಿ, ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಬೇಡದ ಭ್ರೂಣವನ್ನು ತೆಗೆಸಲು ಅನುಮತಿ ಕೋರಿದ್ದರು.