ಮೇಕ್ ಇನ್ ಇಂಡಿಯಾದ ಪ್ರಾಮುಖ್ಯತೆ ಹಾಗೂ ಅದರ ಪರಿಕಲ್ಪನೆ ವಿಭಿನ್ನತೆಯನ್ನು ಹೊಂದಿರಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗುರಿ ಶ್ರೀಮಂತರ ಮೇಲಿದೆ. ಆದರೆ, ನನ್ನ ಪ್ರಕಾರ ಮೇಕ್ ಇನ್ ಇಂಡಿಯಾದ ಗುರಿ ಸಣ್ಣ ಉದ್ಯಮಿಗಳ ಮೇಲಿರಬೇಕು. ಸಣ್ಣ ಹಾಗೂ ಮಧ್ಯಮ ಉದ್ಯಮಕ್ಕೆ ಹೆಚ್ಚಿನ ಆದ್ಯತೆಗಳನ್ನು ನೀಡಿದರೆ, ಅವುಗಳೂ ಕೂಡ ದೊಡ್ಡ ಶ್ರೀಮಂತಿಕೆಯನ್ನು ಕಾಣಲಿದೆ. ಆದರೆ, ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಇದು ಆಗುತ್ತಿಲ್ಲ. ನಮ್ಮ ಗುರಿಗಳು ಈ ನಿಟ್ಟಿನಲ್ಲಿದ್ದಾಗ ಮಾತ್ರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಿದ್ದಾರೆ.
ಕೃಷಿ ಕ್ಷೇತ್ರದ ಕಡೆಗೂ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ. ಕೃಷಿ ಕ್ಷೇತ್ರದತ್ತ ಗಮನಸಿದ್ದೇ ಆದರೆ, ಈ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ನಿರುದ್ಯೋಗ ಎಬುದು ದೇಶದ ಬೆಳವಣಿಗೆಯ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಬಡವರಾಗಲೀ ಅಥವಾ ಶ್ರೀಮಂತರೇ ಆಗಿರಲಿ ಕೇಂದ್ರ ಸರ್ಕಾರ ಶಿಕ್ಷಣ, ಆರೋಗ್ಯ ವ್ಯವಸ್ಥೆಗಳನ್ನು ಜನರಿಗೆ ನೀಡಬೇಕು ಎಂದಿದ್ದಾರೆ.