ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಮತ್ತು ಚೀನಾ ರಾಷ್ಟ್ರಗಳ ನಡುವೆ ಸಹಕಾರ ಹಾಗೂ ಸ್ಪರ್ಧೆಯಿದೆ. ಚೀನಾದೊಂದಿಗೆ ನಾವು ಸ್ಪರ್ಧಿಸುವ ಅಗತ್ಯವಾಗಿದೆ. ಆದರೆ, ನಮ್ಮ ಸ್ಪರ್ಧೆ ಅಷ್ಟು ಸಮರ್ಥವಾಗಿಲ್ಲ. ಒಂದು ವಲಯ, ಒಂದು ರಸ್ತೆ ಯೋಜನೆಯಂತಹ ದೂರದೃಷ್ಟಿಯೊಂದಿಗೆ ಚೀನಾ ಮುನ್ನಡೆಯುತ್ತಿದೆ. ಭಾರತವೂ ಅಂಥ ದೂರದೃಷ್ಟಿಯನ್ನು ಒಳಗೊಂಡಿದೆಯೇ? ಹೇಗಿದೆ ಆ ಯೋಜನೆ? ನಮ್ಮ ಮತ್ತು ಚೀನಾ ನಡುವಿನ ಸಹಕಾರ ಯಾವ ನಿಟ್ಟಿನಲ್ಲಿ ಸಾಗಲಿದೆ? ಈ ಮೂಲಭೂತ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಭಾರತ ಸಾಗಬೇಕಿದೆ ಎಂದು ವಿವರಿಸಿದ್ದಾರೆ.