ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪುಲ್ವಾಮಾದ ತ್ರಾಲ್ ಬಸ್ ನಿಲ್ದಾಣದ ಸಮೀಪ ಪಹರೆಗಾಗಿ ಪೊಲೀಸ್ ಮತ್ತು ಸೇನಾ ವಾಹನಗಳು ನಿಂತಿದ್ದವು. ಇದನ್ನೇ ತಮ್ಮ ದುಷ್ಕೃತ್ಯಕ್ಕೆ ಬಳಸಿಕೊಂಡ ಉಗ್ರರು ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ಗಳನ್ನು ಎಸೆದಿದ್ದು, ಈ ವೇಳೆ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪಾಕ್ ಸೇನೆಯಿಂದಲೂ ಕದನ ವಿರಾಮ ಉಲ್ಲಂಘನೆ
ಅತ್ತ ತ್ರಾಲ್ ನಲ್ಲಿ ಉಗ್ರ ದಾಳಿ ಮುಂದುವರೆದಿರುವಂತೆಯೇ ಇತ್ತ ಗಡಿಯಾಚೆ ಪಾಕಿಸ್ತಾನ ಸೇನೆ ಕೂಡ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಪಡೆಗಳತ್ತ ಶೆಲ್ ದಾಳಿ ನಡೆಸುತ್ತಿದೆ. ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 18ರವರೆಗೂ ಪೂಂಛ್ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ನಿರಂತರ ಶೆಲ್ ದಾಳಿ ನಡೆಸಿದ್ದಾರೆ ಎಂದು ಬಿಎಸ್ ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಗಳಿಂದಾಗಿ ಓರ್ವ ಯೋಧ ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.