ತಮಿಳುನಾಡಿನ ವಿರುದ್ಧ ನಗರ ಜಿಲ್ಲೆಯ ರಾಜಂಪಾಳ್ಯ ಬಳಿ ಈ ಅಪಘಾತ ಸಂಭವಿಸಿದ್ದು, ಕಾರು ಮತ್ತು ಇನ್ನೋವಾ ಕಾರು ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತುಪಟ್ಟ ಏಳೂ ಮಂದಿ ಕರ್ನಾಟಕದ ಮೂಲದವರಾಗಿದ್ದು, ಮೃತರನ್ನು ಲಕ್ಷ್ಮಿ ನಾರಾಯಣ, ರತ್ನ, ಕಲಾವತಿ, ಶಂಕರೇಗೌಡ, ಶ್ರೀಧರ, ಕೀರ್ತಿಕಾ, ಮಗು ಪ್ರವೀಣ್ ಎಂದು ಗುರುತಿಸಲಾಗಿದೆ.