ಜಮ್ಮು-ಕಾಶ್ಮೀರ; ಕದನ ವಿರಾಮ ಉಲ್ಲಂಘಿಸಿದ ಪಾಕ್, ಓರ್ವ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಸುಂದರ್ ಬನಿ ಸೆಕ್ಟರ್ ಬಳಿ ಪಾಕಿಸ್ತಾನ ನಡೆಸಿದ್ದ ಕದನ ವಿರಾಮ ಉಲ್ಲಂಘನೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯೋಧರೊಬ್ಬರು, ಹುತಾತ್ಮರಾಗಿದ್ದಾರೆಂದು ಶನಿವಾರ ತಿಳಿಬುದಂದಿದೆ...
ಹುತಾತ್ಮ ಯೋಧ ಹವಿಲ್ದಾರ್ ಛರಣ್ಜೀತ್ ಸಿಂಗ್
ಹುತಾತ್ಮ ಯೋಧ ಹವಿಲ್ದಾರ್ ಛರಣ್ಜೀತ್ ಸಿಂಗ್
Updated on: 
ಜಮ್ಮು; ಜಮ್ಮು ಮತ್ತು ಕಾಶ್ಮೀರದ ಸುಂದರ್ ಬನಿ ಸೆಕ್ಟರ್ ಬಳಿ ಪಾಕಿಸ್ತಾನ ನಡೆಸಿದ್ದ ಕದನ ವಿರಾಮ ಉಲ್ಲಂಘನೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯೋಧರೊಬ್ಬರು, ಹುತಾತ್ಮರಾಗಿದ್ದಾರೆಂದು ಶನಿವಾರ ತಿಳಿಬುದಂದಿದೆ. 
ಹವಿಲ್ದಾರ್ ಛರಣ್ಜೀತ್ ಸಿಂಗ್ ಹುತಾತ್ಮರಾದ ಯೋಧರೆಂದು ಹೇಳಲಾಗುತ್ತಿದೆ. ಏ.17 ರಂದು ಸುಂದರ್ ಬನಿ ಸೆಕ್ಟರ್ ಬಳಿಕ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಈ ವೇಳೆ ಪಾಕಿಸ್ತಾನ ನಡೆದಿದ್ದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಛರಣ್'ಜೀತ್ ಸಿಂಗ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಹುತಾತ್ಮರಾಗಿದ್ದಾರೆಂದು ವರದಿಗಳು ತಿಳಿಸಿವೆ. 
42 ವರ್ಷ ಸಿಂಗ್ ಅವರು ರಜೌರಿ ಜಿಲ್ಲೆಯ ಕಲ್ಸಿಯಾನ್ ತೆಹ್ಸಿಲ್ ನೌಶಾರಾದ ನಿವಾಸಿಯಾಗಿದ್ದಾರೆ. ಸಿಂಗ್ ಅವರ ಪಾರ್ಥೀವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿಗೆ ಕರೆ ತರಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com