ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅಂತ್ಯ ಸಂಸ್ಕಾರ: ಕೋರ್ಟ್ ನಿರ್ಧಾರ ಕೇಳಿ ಕಣ್ಣೀರಿಟ್ಟ ಸ್ಟಾಲಿನ್

ಭಾವಾನಾತ್ಮಕ ಸನ್ನಿವೇಶಕ್ಕೆ ಐತಿಹಾಸಿಕ ರಾಜಾಜಿ ಹಾಲ್ ಸಾಕ್ಷಿಯಾಯಿತು. ಚೆನ್ನೈನ ರಾಜಾಜಿ ಹಾಲ್ ನಲ್ಲಿ ತಮಿಳುನಾಡು ..
ಕೋರ್ಟ್ ಆದೇಶ ಕೇಳಿ ಕಣ್ಣೀರಿಟ್ಟ ಪುತ್ರ ಸ್ಟಾಲಿನ್
ಕೋರ್ಟ್ ಆದೇಶ ಕೇಳಿ ಕಣ್ಣೀರಿಟ್ಟ ಪುತ್ರ ಸ್ಟಾಲಿನ್
ಚೆನ್ನೈ: ಭಾವಾನಾತ್ಮಕ ಸನ್ನಿವೇಶಕ್ಕೆ ಐತಿಹಾಸಿಕ ರಾಜಾಜಿ ಹಾಲ್  ಸಾಕ್ಷಿಯಾಯಿತು. ಚೆನ್ನೈನ ರಾಜಾಜಿ ಹಾಲ್ ನಲ್ಲಿ ತಮಿಳುನಾಡು ಮಾಜಿ ಸಿಎಂ ಕರಣಾನಿಧಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ  ವ್ಯವಸ್ಥೆ ಮಾಡಲಾಗಿದೆ.
ಮರೀನಾ ಬೀಚ್ ನಲ್ಲಿಯೇ ಕರುಣಾನಿಧಿ ಅಂತ್ಯಕ್ರಿಯೆಗೆ ಮದ್ರಾಸ್ ಹೈ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಪುತ್ರ ಸ್ಟಾಲಿನ್ ಭಾವೋದ್ವೇಗದಿಂದ ಕಣ್ಣೀರು ಹಾಕಿದರು.
ತಮ್ಮ ತಂದೆಯ ಪಾರ್ಥೀವ ಶರೀರದ ಬಳಿ ನಿಂತು ಅಳುತ್ತಿದ್ದ ಸ್ಟಾಲಿನ್ ಅವರನ್ನು ಡಿಎಂಕೆ ನಾಯಕರಾದ ಎ. ರಾಜಾ ಮತ್ತಿತರರು ಸಮಾದಧಾನ ಪಡಿಸಲು ಯತ್ನಿಸಿದರು.
ಹಿರಿಯ ನಾಯಕ ಕರುಣಾ ನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಲು ಸಾವಿರಾರು ಮಂದಿ ರಾಜಾಜಿ ಹಾಲ್ ಗೆ ಭೇಟಿ ನೀಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com