ಅಮೆರಿಕಾದಲ್ಲಿ ಸಿಖ್ಖರ ಮೇಲೆ ಹಲ್ಲೆ: ಕ್ರಮ ಕೈಗೊಂಡ ಸುಷ್ಮಾಗೆ ಹರ್ಸಿಮತ್ ಕೌರ್ ಅಭಿನಂದನೆ

ಅಮೆರಿಕಾದಲ್ಲಿ ಸಿಖ್ ರ ಮೇಲೆ ನಡೆದ ಜನಾಂಗೀಯ ದಾಳಿ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೇಂದ್ರ ಆಹಾರ ...
ಹರ್ಸಿಮತ್ ಕೌರ್
ಹರ್ಸಿಮತ್ ಕೌರ್
ನವದೆಹಲಿ: ಅಮೆರಿಕಾದಲ್ಲಿ ಸಿಖ್ ರ ಮೇಲೆ ನಡೆದ ಜನಾಂಗೀಯ ದಾಳಿ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೇಂದ್ರ ಆಹಾರ ಸಚಿವೆ ಹರ್ಸಿಮ್ರತ್ ಕೌರ್ ಅಭಿನಂದನೆ ಸಲ್ಲಿಸಿದ್ದಾರೆ,
ಈ ಸಂಬಂಧ ಟ್ವೀಟ್ ಮಾಡಿರುವ ಕೌರ್, ಅಮೆರಿಕಾದಲ್ಲಿ ನಡೆದ ಜನಾಂಗೀಯ ಹಲ್ಲೆ ಸಂಬಂಧ ಸುಷ್ಮಾ, ಅಮೆರಿಕಾದ ಆಡಳಿತ ವರ್ಗಕ್ಕೆ ಈ ವಿಷಯ ತಿಳಿಸುವಂತೆ ಭಾರತೀಯ ರಾಯಭಾರ ಕಚೇರಿಗೆ ಸೂಚಿಸಿದ್ದರು.
ನನಗೆ ಈಗಷ್ಟೇ ಸುಷ್ಮಾ ಅವರಿಂದ ಕರೆ ಬಂದಿತ್ತು, ಜನಾಂಗೀಯ ದಾಳಿ ಸಂಬಂಧ ಅವರು ಭಾರತೀಯ ರಾಯಭಾರ ಕಚೇರಿಗೆ ವಿಷಯ ತಿಳಿಸ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿರುವುದಾಗಿ ತಿಳಿಸಿದರು ಎಂದು ಕೌರ್ ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಸಂಸದೆಯಾಗಿರುವ ಹರ್ಸಿಮತ್ ಕೌರ್ ಅಮೆರಿಕಾದಲ್ಲಿ ನಡೆಯುತ್ತಿರುವ ಸಿಖ್ ರ ಮೇಲಿನ ಹಲ್ಲೆ ಸಂಬಂಧ ಸುಷ್ಮಾ ಸ್ವರಾಜ್ ಅವರ ಸಹಾಯ ಕೋರಿದ್ದರು. ಕಳೆದ 7 ದಿನಗಳಲ್ಲಿ 2 ಬಾರಿ ದಾಳಿ ನಡೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com