ನನಗೆ ಈಗಾಗಲೇ ವಿವಾಹವಾಗಿದೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ!

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿವಾಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುವುದುಂಟು, ಈ ಬಗ್ಗೆ ಸ್ವತಃ ರಾಹುಲ್ ಗಾಂಧಿಯೇ ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ಹೈದರಾಬಾದ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿವಾಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುವುದುಂಟು, ಈ ಬಗ್ಗೆ ಸ್ವತಃ ರಾಹುಲ್ ಗಾಂಧಿಯೇ ಸ್ಪಷ್ಟನೆ ನೀಡಿದ್ದಾರೆ. 
ಆ.14 ರಂದು ಹೈದರಾಬಾದ್ ನಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿರುವ ರಾಹುಲ್ ಗಾಂಧಿಗೆ ಪತ್ರಕರ್ತರು "ನಿಮ್ಮ ವಿವಾಹದ ಯೋಜನೆಯೇನು?" ಎಂದು ಪ್ರಶ್ನಿಸಿದರು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಗಾಂಧಿ, ನಾನು ಈಗಾಗಲೇ ವಿವಾಹವಾಗಿದ್ದೇನೆ, ನನ್ನ ಪಕ್ಷದೊಂದಿಗೆ ನನ್ನ ವಿವಾಹವಾಗಿದೆ (I am married to Congress) ಎಂದು ಹೇಳಿದ್ದಾರೆ. 
2019 ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿರುವುದಿಲ್ಲ. ಬಿಜೆಪಿ ಕನಿಷ್ಠ 230 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವುದಿಲ್ಲ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ಗಾಂಧಿ ಇದೇ ವೇಳೆ ಹೇಳಿದ್ದಾರೆ.  ರಾಹುಲ್ ಗಾಂಧಿ ಈ ರೀತಿ ಹೇಳುತ್ತಿದ್ದಂತೆ, "ಹಾಗಾದರೆ ಬಿಜೆಪಿಯೇತರ ಕಾಂಗ್ರೆಸ್ ನೇತೃತ್ವದ ಮಿತ್ರ ಪಕ್ಷಗಳು ಬಹುಮತ ಗಳಿಸಿದರೆ ಪ್ರಧಾನಿ ಯಾರು’? ಎಂಬ ಪತ್ರಕರ್ತರ ಗೂಗ್ಲಿಗೆ ರಾಹುಲ್ ಗಾಂಧಿ ನೇರವಾದ ಉತ್ತರ ನೀಡದೇ, ಚುನಾವಣೆಯ ನಂತರ ನಿರ್ಧಾರವಾಗುತ್ತೆ ಎಂದಷ್ಟೆ ಹೇಳಿದ್ದಾರೆ. 
ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ನ ರಾಜ್ಯ ವಿಭಾಗಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com