ತಾಯಿಯೊಂದಿಗೆ ಜಗಳ ಮಾಡಿದ್ದ ನಾನು ಬೇಸರಗೊಂಡು ಜೀವ ತೆಗೆದುಕೊಳ್ಳಬೇಕೆನ್ನಿಸುತ್ತಿದೆ ಎಂದು ಪೋಸ್ಟ್ ಹಾಕಿದ್ದೆ. ಇದಾದ ಬಳಿಕ ಅನಾಮಧೇಯ ವ್ಯಕ್ತಿಯಿಂದ ಮೆಮೋ ಗೇಮ್ ಚಾಲೆಂಜ್ ಆಡುವಂತೆ ಆಹ್ವಾನ ಬಂದಿತ್ತು. ವ್ಯಕ್ತಿಯ ಗುರ್ತಿಕೆ ತಿಳಿದುಕೊಳ್ಳಲು ಯತ್ನಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಇದರಿಂದ ಆತಂಕಗೊಂಡು ನನ್ನ ಸಹೋದರಿಗೆ ಈ ವಿಚಾರ ತಿಳಿಸಿದೆ. ಈ ವೇಳೆ ಆತ ಆಟವನ್ನು ಆಡದಂತೆ ಎಚ್ಚರಿಸಿ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದ ಎಂದು ಯುವತಿ ಹೇಳಿದ್ದಾಳೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.