ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ರದ್ದುಪಡಿಸಲು ಸುಪ್ರೀಂಕೋರ್ಟ್ ನಕಾರ

ಪಶ್ಚಿಮ ಬಂಗಾಳದಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ 20 ಸಾವಿರ ಸ್ಥಳೀಯ ಸಂಸ್ಥೆಗಳ ಚುನಾವಣೆ ರದ್ದುಪಡಿಸುವಂತೆ ಸಿಪಿಐ ( ಎಂ) ಹಾಗೂ ಬಿಜೆಪಿ ಸಲ್ಲಿಸಿದ ಅರ್ಜಿಗೆ ಸುಪ್ರೀಂಕೋರ್ಟ್ ನಲ್ಲಿ ಹಿನ್ನಡೆ ಆಗಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಉಸಿರು ಬಂದಂತಾಗಿದೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on: 

ನವದೆಹಲಿ : ಪಶ್ಚಿಮ ಬಂಗಾಳದಲ್ಲಿ  ಅವಿರೋಧವಾಗಿ ಆಯ್ಕೆಯಾಗಿರುವ  20 ಸಾವಿರ ಸ್ಥಳೀಯ ಸಂಸ್ಥೆಗಳ ಚುನಾವಣೆ ರದ್ದುಪಡಿಸುವಂತೆ ಸಿಪಿಐ ( ಎಂ) ಹಾಗೂ ಬಿಜೆಪಿ ಸಲ್ಲಿಸಿದ ಅರ್ಜಿಗೆ ಸುಪ್ರೀಂಕೋರ್ಟ್ ನಲ್ಲಿ ಹಿನ್ನಡೆ ಆಗಿದ್ದು,  ಮಮತಾ ಬ್ಯಾನರ್ಜಿ ಅವರಿಗೆ ಉಸಿರು ಬಂದಂತಾಗಿದೆ.

ಈ ಎಲ್ಲಾ ಸ್ಥಾನಗಳಲ್ಲಿ  ವಿರೋಧ ಇಲ್ಲದ  ಹಿನ್ನೆಲೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ  ಅಭ್ಯರ್ಥಿಗಳು ಅವಿರೋಧವಾಗಿ  ಆಯ್ಕೆಯಾಗಿದ್ದರು. ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದನ್ನು ತಡೆಯಲಾಗಿತ್ತು ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಆದಾಗ್ಯೂ, ಈ ಆರೋಪಗಳನ್ನು ಗಮನಿಸಿದ  ಸುಪ್ರೀಂಕೋರ್ಟ್, ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು  ಚುನಾವಣೆಗೆ ಸಂಬಂಧಿಸಿದ ದೂರನ್ನು   ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು  ಹೇಳಿಕೆ ನೀಡಿತು.

 ಚುನಾವಣೆಗೆ ಸಂಬಂಧಿಸಿದ ದೂರನ್ನು ಸಲ್ಲಿಸುವ 30 ದಿನಗಳ ಅವಧಿ ಮಿತಿಯ ಅವಧಿ ಮುಗಿದಿದ್ದರಿಂದ ಸುಪ್ರೀಂಕೋರ್ಟ್  ಮುಖ್ಯನ್ಯಾಯಾಧೀಶ ದೀಪಕ್ ಮಿಶ್ರಾ , ಎ.ಎಂ. ಖನ್ವೀಲ್ ಕರ್ ಮತ್ತು ಡಿ. ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಸಂವಿಧಾನದ 142 ನೇ ಪರಿಚ್ಛೇದದಡಿಯಲ್ಲಿ ತನ್ನ ಅಸಾಧಾರಣ ಶಕ್ತಿಯನ್ನು ವ್ಯಕ್ತಪಡಿಸಿತು.

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಹೊರಡಿಸದಂತೆ  ಪಶ್ಚಿಮ ಬಂಗಾಳ ಚುನಾವಣಾ ಆಯೋಗಕ್ಕೆ ಈ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಈ ಮಧ್ಯೆ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದ ನ್ಯಾಯಾಲಯ, ಇ- ಮೇಲ್ , ವಾಟ್ಸಪ್ ಮೂಲಕ  ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಜನಪ್ರತಿನಿಧಿ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ಹೇಳಿತ್ತು.

 ಪಶ್ಚಿಮ ಬಂಗಾಳದಲ್ಲಿನ 58, 692 ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ 20,159 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಸಿಪಿಐ (ಎಂ) ಹಾಗೂ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com