ಮಹಾರಾಷ್ಟ್ರ: ಅಂಕಲ್ ನಿಂದ ಅತ್ಯಾಚಾರ, ಏಳು ತಿಂಗಳಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

ಒಂದೇ ಮನೆಯಲ್ಲಿದ್ದ ಅಂಕಲ್ ವೊಬ್ಬ ಪದೇ ಪದೇ ಅತ್ಯಾಚಾರ ನಡೆಸಿದ್ದರಿಂದ 17 ವರ್ಷದ ಬಾಲಕಿಯೋರ್ವಳು ಏಳು ತಿಂಗಳಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮಹಾರಾಷ್ಟ್ರ:  ಒಂದೇ ಮನೆಯಲ್ಲಿದ್ದ ಅಂಕಲ್ ವೊಬ್ಬ  ಪದೇ ಪದೇ ಅತ್ಯಾಚಾರ ನಡೆಸಿದ್ದರಿಂದ 17 ವರ್ಷದ ಬಾಲಕಿಯೋರ್ವಳು  ಏಳು ತಿಂಗಳಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ  ಮಹಾರಾಷ್ಟ್ರದಲ್ಲಿ ನಡೆದಿದೆ.
ಹೊಟ್ಟೆನೋವಿನಿಂದ ಬಳಲುತ್ತಿದ್ದ  ಬಾಲಕಿ ಸ್ಥಳೀಯ ಆಸ್ಪತ್ರೆಗೆ ಹೋದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.
ಪಿಂಪ್ರಿ-ಚಿಂಚ್ವಾಡ್ ನಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮೇಲೆ ಈ ವರ್ಷದ ಮೇ ತಿಂಗಳಿನಿಂದ ಅಂಕಲ್  ಅತ್ಯಾಚಾರ ನಡೆಸಿದ್ದಾನೆ. ನಂತರ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಆಕೆಯಿಂದ ಪ್ರಮಾಣ ಮಾಡಿಸಿಕೊಂಡಿದ್ದನಂತೆ.
ಆತನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಮನೆ ಬಿಟ್ಟು ಹೋಗಿದ್ದಳು ಎಂಬುದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com