ಹೆರಿಗೆಗೂ ಮುನ್ನ ವೈದ್ಯರ ಜೊತೆ ಕುಣಿದ ತುಂಬು ಗರ್ಭೀಣಿ, ವಿಡಿಯೋ ವೈರಲ್!

ಮಗುವಿಗೆ ಜನ್ಮ ನೀಡುವ 1 ನಿಮಿಷದ ಮುಂಚೆ ತನ್ನ ವೈದ್ಯರ ಜೊತೆ ಗರ್ಭೀಣಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಗುವಿಗೆ ಜನ್ಮ ನೀಡುವ 1 ನಿಮಿಷದ ಮುಂಚೆ ತನ್ನ ವೈದ್ಯರ ಜೊತೆ ಗರ್ಭೀಣಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಜೆರಿಯನ್ ಆಪರೇಷನ್ ಮಾಡಿಸಿಕೊಳ್ಳಬೇಕಿದ್ದ ತುಂಬು ಗರ್ಭೀಣಿ ತನ್ನ ಆತಂಕವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ವೈದ್ಯರ ಜೊತೆ ಡ್ಯಾನ್ಸ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ವಿಡಿಯೋವನ್ನು ಹರ್ಷಾ ಗೊಯೆಂಕಾ ಎಂಬುವರು ಟ್ವೀಟ್ ಮಾಡಿದ್ದು ಪಂಜಾಬ್ ನ ಲುಧಿಯಾನದಲ್ಲಿ ಈ ಘಟನೆ ನಡೆದಿದೆ.
ದಿಲ್ ದಡ್ಕನೆ ದೊ ಚಿತ್ರದ ಗರ್ಲ್ಸ್ ಲೈಕ್ ಟು ಸ್ವಿಂಗ್ ಎಂಬ ಹಾಡಿಗೆ ಗರ್ಭಿಣಿ ಹಾಗೂ ವೈದ್ಯರು ಡ್ಯಾನ್ಸ್ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಟ್ವೀಟರಿಗರು ಹಾಸ್ಯಾತ್ಮಕವಾಗಿ ಟ್ವೀಟ್ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com