ಭಾಗವತ್ ಆರ್'ಎಸ್ಎಸ್-ಸೇನೆ ಹೋಲಿಕೆ ಮಾಡಿಲ್ಲ, ತಪ್ಪಾಗಿ ಅರ್ಥೈಸಲಾಗಿದೆ: ಆರ್'ಎಸ್ಎಸ್ ಸ್ಪಷ್ಟನೆ

Published On :
ನವದೆಹಲಿ: ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತೀಯ ಸೇನೆ ಹಾಗೂ ಆರ್'ಎಸ್ಎಸ್ ಶಿಸ್ತು ಕುರಿತಂತೆ ಮಾತನಾಡಿದ್ದು, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೋಮವಾರ ಸ್ಪಷ್ಟನೆ ನೀಡಿದೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಮೋಹನ್ ಭಾಗವತ್ ಅವರು, ಯಾವುದೇ ಕಾರ್ಯಾಚರಣೆ ನಡೆಸಬೇಕೆಂದರೂ ಭಾರತೀಯ ಸೇನೆ 6-7 ತಿಂಗಳು ಕಾಲ ತೆಗೆದುಕೊಳ್ಳುತ್ತದೆ. ಆದರೆ, ನಮ್ಮ ಸಂಘ ಮೂರು ದಿನಗಳಲ್ಲಿ ಇಂತಹ ಯೋಜನೆ ರೂಪಿಸುವ ಸಾಮರ್ಥ್ಯವನ್ನು ನೀಡಿದೆ. ಅಗತ್ಯ ಬಿದ್ದರೆ, ದೇಶದ ರಕ್ಷಣೆಗಾಗಿ ಕೇವಲ ಮೂರು ದಿನಗಳಲ್ಲಿ ಕಾರ್ಯಕರ್ತರನ್ನು ಸೇನೆಯಂತೆ ಸಜ್ಜುಗೊಳಿಸುವ ಸಾಮರ್ಥ್ಯ ಆರ್'ಎಸ್ಎಸ್'ಗೆ ಇದೆ. ಸಂವಿಧಾನ ಅವಕಾಶ ನೀಡಿದರೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಹ ಸ್ವಯಂ ಸೇವಕರು ಸಜ್ಜಾಗಿದ್ದಾರೆಂದು ಹೇಳಿದ್ದರು.
ಭಾಗವತ್ ಅವರ ಹೇಳಿಕೆಗೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಆರ್'ಎಸ್ಎಸ್, ಭಾಗವತ್ ಆರ್'ಎಸ್ಎಸ್ ಮತ್ತು ಸೇನೆಯನ್ನು ಹೋಲಿಕೆ ಮಾಡಿಲ್ಲ. ಮೋಹನ್ ಭಾಗವತ್ ಅವರು. ಭಾರತೀಯ ಸೇನೆ ಹಾಗೂ ಆರ್'ಎಸ್ಎಸ್ ಶಿಸ್ತು ಕುರಿತಂತೆ ಮಾತನಾಡಿದ್ದು, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದೆ.
ಪರಿಸ್ಥಿತಿ ಎದುರಾದರೆ, ಸಂವಿಧಾನ ಅನುಮತಿ ನೀಡಿದ್ದೇ ಆದರೆ, ಯುದ್ಧಕ್ಕೆ ಸಾಮಾನ್ಯ ಜನರನ್ನು ತಯಾರಿ ಮಾಡಲು ಭಾರತೀಯ ಸೇನೆ 6 ತಿಂಗಳ ಕಾಲ ಬೇಕಾಗುತ್ತದೆ. ಆದರೆ, ಆರ್'ಎಸ್ಎಸ್ ಕಾರ್ಯಕರ್ತರನ್ನು ಮೂರು ದಿನಗಳಲ್ಲಿ ತಯಾರು ಮಾಡುತ್ತದೆ. ಏಕೆಂದರೆ, ಸ್ವಯಂಸೇವಕ ಸಂಘದ ಕಾರ್ಯಕರ್ತರು ಅಷ್ಟೊಂದು ಶಿಸ್ತನ್ನು ಹೊಂದಿರುವ ಕಾರ್ಯಕರ್ತರಾಗಿದ್ದಾರೆಂಬ ಅರ್ಥದಲ್ಲಿ ಭಾಗವತ್ ಅವರು ಹೇಳಿಕೆ ನೀಡಿದ್ದಾರೆ. ಭಾಗವತ್ ಅವರು ಆರ್'ಎಸ್ಎಸ್ ಹಾಗೂ ಸೇನೆಯನ್ನು ಹೋಲಿಕೆ ಮಾಡಿಲ್ಲ. ಆರ್'ಎಸ್ಎಸ್ ಕಾರ್ಯಕರ್ತರಾಗಲೀ, ಸಾಮಾನ್ಯ ನಾಗರೀಕರೇ ಆಗಲೀ ಎಲ್ಲರನ್ನೂ ಸೇನೆಯೇ ತಯಾರು ಮಾಡಬೇಕೆಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


