ನಿಮ್ಮ ವೈಫಲ್ಯಕ್ಕೆ ನಮ್ಮನ್ನು ದೂರಬೇಡಿ: ಟ್ರಂಪ್ ಗೆ ಪಾಕಿಸ್ತಾನ ತಿರುಗೇಟು

ಪಾಕಿಸ್ತಾನದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸಮಾಧಾನ ಹೊರಬೀಳುತ್ತಿದ್ದಂತೆಯೇ ಟ್ರಂಪ್ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನ ನಿಮ್ಮ ವೈಫಲ್ಯಕ್ಕೆ ನಮ್ಮನ್ನು ದೂರಬೇಡಿ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಇಸ್ಲಾಮಾಬಾದ್: ಪಾಕಿಸ್ತಾನದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸಮಾಧಾನ ಹೊರಬೀಳುತ್ತಿದ್ದಂತೆಯೇ ಟ್ರಂಪ್ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನ ನಿಮ್ಮ ವೈಫಲ್ಯಕ್ಕೆ ನಮ್ಮನ್ನು ದೂರಬೇಡಿ ಎಂದು ಹೇಳಿದೆ.
ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರ ನಿಗ್ರಹಕ್ಕಾಗಿ ಅಮೆರಿಕ ನೀಡುತ್ತಿದ್ದ ಆರ್ಥಿಕ ನೆರವು ವ್ಯರ್ಥವಾಗಿದ್ದು, ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಮುಂದೆ ಇಂತಹ ಪ್ರಮಾದವಾಗಲು ನಾವು  ಬಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಇದೀಗ ಪಾಕಿಸ್ತಾನದ ಮುಜುಗರಕ್ಕೆ ಕಾರಣವಾಗಿದ್ದು, ಅಮೆರಿಕ ಅಧ್ಯಕ್ಷರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಅವರು,  ಆಫ್ಘಾನಿಸ್ತಾನದಲ್ಲಿನ ನಿಮ್ಮ ವೈಫಲ್ಯಕ್ಕೆ ನಮ್ಮನ್ನು ದೂರುವುದು ಸರಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಖ್ವಾಜಾ ಆಸಿಫ್ ಅವರು, ಅಮೆರಿಕ ಅಧ್ಯಕ್ಷ ಟ್ರಂಪ್‌ ಟ್ವೀಟ್‌ ಗೆ ನಾವು ಶೀಘ್ರದಲ್ಲೇ ಪ್ರತಿಕ್ರಿಯಿಸುತ್ತೇವೆ. ವಿಶ್ವಕ್ಕೆ ನಾವು ಸತ್ಯವನ್ನು ತಿಳಿಸುತ್ತೇವೆ. ಅಷ್ಟೇ ಅಲ್ಲ ವಾಸ್ತವವೇನು ಮತ್ತು ಕಟ್ಟುಕಥೆ ಯಾವುದು  ಎಂದೂ ವಿವರಿಸುತ್ತೇವೆ ಎಂದು  ಹೇಳಿದ್ದಾರೆ. 
ಅಂತೆಯೇ ಟ್ರಂಪ್‌ ವಾಗ್ಧಾಳಿ ನಡೆಸುತ್ತಿದ್ದಂತೆಯೇ ಪ್ರಧಾನಿ ಶಾಹಿದ್‌ ಅಬ್ಟಾಸಿ ಜತೆಗೆ ಅಸಿಫ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com