ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, 'ಬಿಜೆಪಿಯ ಸರಳ ನಿಯಮ ‘ನಮ್ಮನ್ನು ಅನುಸರಿಸಿ ಇಲ್ಲದಿದ್ದರೆ, ನಾವು ನಿಮಗೆ ಶಾಸ್ತಿ ಮಾಡುತ್ತೇವೆ’ ಎಂಬುದನ್ನು ಆಚರಿಸುವ ಬದಲು ನಾನು ಸಾಮಾಜಿಕ ನ್ಯಾಯ, ಸೌಹಾರ್ದ ಹಾಗೂ ಸಮಾನತೆಗೆ ಸಾಯಲು ಸಿದ್ಧ ಎಂದು ಲಾಲು ಪ್ರಸಾದ್ ಹೇಳಿದ್ದಾರೆ. ಒಂದು ವೇಳೆ ಲಾಲು ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡರೆ, ಅವರು ರಾಜಾ ಹರಿಶ್ಚಂದ್ರನಂತೆ ಅತಿ ಹೆಚ್ಚು ನಂಬಿಕೆಯ ವ್ಯಕ್ತಿಯಾಗುತ್ತಾರೆ. ಲಾಲು ಅವರು ಜೈಲಿನಲ್ಲಿ ಇದ್ದರೂ ಬಿಜೆಪಿ ಹಾಗೂ ಆರೆಸ್ಸೆಸ್ ಹೆದರುತ್ತಿರುವುದು ಸ್ಪಷ್ಟ. ಲಾಲು ಅವರ ಧ್ವನಿ ನಿಗ್ರಹಿಸಲು ಅವರು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.