ಅಭ್ಯರ್ಥಿಗಳಿಗಿಂತ ನೋಟಾಗೆ ಅತಿಹೆಚ್ಚು ಮತಗಳು ಬಿದ್ದರೆ ಮರುಚುನಾವಣೆ ಸೂಕ್ತ: ಮಾಜಿ ಸಿಇಸಿ
ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗಿಂತ ನೋಟಾ ಮತಗಳು ಹೆಚ್ಚಿದ್ದರೆ ಅಂತಹ ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಟಿಎಸ್ ಕೃಷ್ಣಮೂರ್ತಿ ಹೇಳಿದ್ದಾರೆ.
ಗೆಲುವಿನ ಅಂತರ ನೋಟಾ ಮತಗಳಿಂದ ಕಡಿಮೆ ಇದ್ದರೆ ಮರುಚುನಾವಣೆ ಸೂಕ್ತ: ಮಾಜಿ ಸಿಇಸಿ
ನವದೆಹಲಿ: ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗಿಂತ ನೋಟಾ ಮತಗಳು ಹೆಚ್ಚಿದ್ದರೆ ಅಂತಹ ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಟಿಎಸ್ ಕೃಷ್ಣಮೂರ್ತಿ ಹೇಳಿದ್ದಾರೆ.
ಗೆಲುವಿನ ಮತಗಳಿಗಿಂತ ನೋಟಾ ಮತಗಳೇ ಹೆಚ್ಚಿದ್ದರೆ ಆ ಅಭ್ಯರ್ಥಿ 3 ನೇ ಒಂದರಷ್ಟು ಮತಗಳನ್ನು ಪಡೆಯುವಲ್ಲಿ ವಿಫಲವಾಗುತ್ತಾನೆ ಎಂದು ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನೋಟಾ ಆಯ್ಕೆ ನೀಡಿರುವುದು ಬಹಳ ಒಳ್ಳೆಯ ಆಯ್ಕೆಯಾಗಿದ್ದು, ಗೆಲ್ಲುವ ಅಭ್ಯರ್ಥಿಗಳಿಗಿಂತ ಹೆಚ್ಚಿದ್ದರೆ ಮರುಚುನಾವಣೆ ಅಗತ್ಯವಿರುತ್ತದೆ ಎಂದು ಕೃಷ್ಣಮೂರ್ತಿ ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ರೂಪುಗೊಳ್ಳುವ ಅಗತ್ಯವಿದೆ ಎಂದು ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.