69ನೇ ಗಣರಾಜ್ಯೋತ್ಸವ: ಭಾರತೀಯರಿಗೆ ಡೂಡಲ್ ಮೂಲಕ ಶುಭ ಕೋರಿದ ಗೂಗಲ್!

69ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿರುವ ಭಾರತೀಯರಿಗೆ ಖ್ಯಾತ ಅಂತರ್ಜಾಲ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ಶುಭ ಕೋರಿದೆ.
ಗಣ ರಾಜ್ಯೋತ್ಸವ ಗೂಗಲ್ ಡೂಡಲ್
ಗಣ ರಾಜ್ಯೋತ್ಸವ ಗೂಗಲ್ ಡೂಡಲ್
Updated on: 
ನವದೆಹಲಿ: 69ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿರುವ ಭಾರತೀಯರಿಗೆ ಖ್ಯಾತ ಅಂತರ್ಜಾಲ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ಶುಭ ಕೋರಿದೆ.
ಜನವರಿ 26 ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದ ದಿನವಾಗಿದ್ದು, ಜನವರಿ 26 1949 ರಂದು ಭಾರತ ತನ್ನ ಸಂವಿಧಾನವನ್ನು ಜಾರಿಗೆ ತಂದಿತ್ತು. ಬಳಿಕ ಜನವರಿ 26 1950ರಂದು ಭಾರತ ತನ್ನ  ಮೊದಲ ಗಣರಾಜ್ಯೋತ್ಸವ ಆಚರಣೆ ಮಾಡಿತ್ತು. ಆಂದಿನಿಂದ ಪ್ರತೀ ವರ್ಷ ಜನವರಿ 26ರಂದು ಭಾರತ ಗಣರಾಜ್ಯೋತ್ಸವ ಆಚರಿಸುತ್ತಾ ಬಂದಿದೆ. ಈ ವಿಶೇಷ ದಿನದ ನಿಮಿತ್ತ ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧ  ರಾಜ್ಯಗಳ ರಾಜಧಾನಿಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.
ಪ್ರಮುಖವಾಗಿ ದೆಹಲಿಯಲ್ಲಿ ನಡೆಯುವ ಪಥಸಂಚಲನ ಇಡೀ ವಿಶ್ವದ ಗಮನೆ ಸೆಳೆದಿದೆ. ಪ್ರಮುಖವಾಗಿ ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರ ಪ್ರತೀ ವರ್ಷ ವಿಶ್ವದ ವಿವಿಧ ಗಣ್ಯರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಮೂಲಕ  ತನ್ನ ವಿದೇಶಾಂಗ ನೀತಿಯ ಜಾಣ್ಮೆಯನ್ನು ಮೆರೆಯುತ್ತದೆ.
ಈ ಬಾರಿ ಭಾರತ ಪ್ರಧಾನಿ ನರೇಂದ್ರ ಮೋದಿ ಅಸಿಯಾನ್ ಒಕ್ಕೂಟದ ನಾಯಕರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿದ್ದಾರೆ. ಆ ಮೂಲಕ ಭಾರತ ಹೊರತು ಪಡಿಸಿ ಇರುವ ಇತರೆ ಒಕ್ಕೂಟಗಳಿಗೆ ಪ್ರಧಾನಿ ಮೋದಿ ಬಿಸಿ  ಮುಟ್ಟಿಸಿದ್ದಾರೆ. ಪ್ರಮುಖವಾಗಿ ಭಾರತ ಈ ನಡೆ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಜಾರಿಗೆ ತಂದಿರುವ ಚೀನಾಗೆ ಇರುಸು-ಮುರುಸು ಉಂಟು ಮಾಡಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com