ಬಿಜೆಪಿ ತೊರೆಯುವುದಿಲ್ಲ, ಬೇಕಿದ್ದರೆ ಆವರೇ ನನ್ನನ್ನು ಉಚ್ಛಾಟಿಸಲಿ: ಯಶವಂತ್ ಸಿನ್ಹಾ

ನಾನು ಬಿಜೆಪಿ ಪಕ್ಷವನ್ನು ತೊರೆಯುವುದಿಲ್ಲ. ಬೇಕಿದ್ದರೇ ಅವರೇ ನನ್ನನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲಿ ಎಂದು ಅತೃಪ್ತ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ಬುಧವಾರ ಹೇಳಿದ್ದಾರೆ...
ಬಿಜೆಪಿ ನಾಯಕ ಯಶವಂತ ಸಿನ್ಹಾ
ಬಿಜೆಪಿ ನಾಯಕ ಯಶವಂತ ಸಿನ್ಹಾ
Updated on: 
ಜಬಲ್ಪುರ: ನಾನು ಬಿಜೆಪಿ ಪಕ್ಷವನ್ನು ತೊರೆಯುವುದಿಲ್ಲ. ಬೇಕಿದ್ದರೇ ಅವರೇ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಅತೃಪ್ತ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ಬುಧವಾರ ಹೇಳಿದ್ದಾರೆ. 
ಸರ್ಕಾರದ ಆಡಳಿತ, ದೇಶದ ಪರಿಸ್ಥಿತಿ ಬಗ್ಗೆ ರಾಜಕೀಯ ನಾಯಕರಿಗಾಗಿ ರಾಷ್ಟ್ರಮಂಚ್ ಎಂಬ ವೇದಿಕೆಯನ್ನು ನಿರ್ಮಾಣ ಮಾಡಿದ್ದ ಸಿನ್ಹಾ ಅವರು ಇತ್ತೀಚೆಗಷ್ಟೇ ಲೋಕಾರ್ಪಣೆಗೊಳಿಸಿದ್ದರು. 
ಸುದ್ದಿಗಾರರೊಂದಿಗೆ ಮಾತನಾಡಿರುವ ಸಿನ್ಹಾ ಅವರು, ಬಿಜೆಪಿ ಸದಸ್ಯನಾಗಿರುವುದಕ್ಕಿಂತಲೂ ಭಾರತ ದೇಶದ ಪ್ರಜೆಯಾಗಿರುವುದು ಅತ್ಯಂತ ದೊಡ್ಡದು. ನಾನು ಪಕ್ಷವನ್ನು ತೊರೆಯುವುದಿಲ್ಲ. ಒಂದು ವೇಳೆ ಬಿಜೆಪಿ ಬಯಸಿದ್ದೇ ಆದರೆ, ನನ್ನನ್ನು ಪಕ್ಷದಿಂದ ಹೊರಗೆ ಹಾಕಲಿ ಎಂದು ಹೇಳಿದ್ದಾರೆ. 
ವಿರೋಧ ಪಕ್ಷದ ವ್ಯಕ್ತಿಯಾಗಿಯೋ ಅಥವಾ ಯಾವುದೇ ಪಕ್ಷದ ನೀತಿಗಳಿಂದಲೋ ನಾನು ರೈತರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿಲ್ಲ. ದೇಶದ ಪ್ರಜೆಯಾಗಿ ಗಮನಹರಿಸಿದ್ದೆ. ರಾಷ್ಟ್ರಮಂಚ್ ರೈತರ ಹಾಗೂ ನಿರುದ್ಯೋಗಸ್ಥ ಜನರ ಚಳುವಳಿಯ ವೇದಿಕೆಯಾಗಿದೆ. ದೆಹಲಿ ಮತ್ತು ಭೂಪಾಲ್ ನಲ್ಲಿ ಕುಳಿತಿರುವ ಜನರಿಗೆ ರೈತರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ವಿಭಿನ್ನವಾಗಿ ಚಿಂತನೆ ನಡೆಸುವ ಜನರ ವಿರುದ್ದ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 
ಇತ್ತೀಚಿನ ಆರ್ಥಿಕ ಸಮೀಕ್ಷೆ ನಿರುದ್ಯೋಗ, ಶಿಕ್ಷಣ ಹಾಗೂ ರೈತರ ಸಮಸ್ಯೆಗಳನ್ನು ಉಲ್ಲೇಖ ಮಾಡಿದೆ. ಈ ಸಮಸ್ಯೆಗಳು ರಾತ್ರೋರಾತ್ರಿ ಉದ್ಭವಗೊಳ್ಳಲಿಲ್ಲ. ಕಳೆದ ಮೂರು ವರ್ಷಗಳಲ್ಲಿ ಸಮಸ್ಯೆಗಳನ್ನು ಎಣಿಕೆ ಮಾಡುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com