ಅಮೆರಿಕ ವಿರೋಧದ ನಡುವೆಯೂ ಭಾರತದಿಂದ ರಷ್ಯಾದ ವಿನಾಶಕಾರಿ ಟ್ರಯಂಫ್ ಕ್ಷಿಪಣಿ ಖರೀದಿ!

ಅಮೆರಿಕ ಸರ್ಕಾರದ ನಿರ್ಬಂಧದ ಭೀತಿ ನಡುವೆಯೂ ರಷ್ಯಾದ ಸುಧಾರಿತ ಕ್ಷಿಪಣಿ ರಕ್ಷಾ ಕವಚ ವ್ಯವಸ್ಥೆ ಟ್ರಯಂಫ್‌ ಎಸ್‌-400ಅನ್ನು ಖರೀದಿ ಮಾಡಲು ಭಾರತ ಇನ್ನಷ್ಟು ತ್ವರಿತಗತಿಯಲ್ಲಿ ಹೆಜ್ಜೆ ಇಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಅಮೆರಿಕ ಸರ್ಕಾರದ ನಿರ್ಬಂಧದ ಭೀತಿ ನಡುವೆಯೂ ರಷ್ಯಾದ ಸುಧಾರಿತ ಕ್ಷಿಪಣಿ ರಕ್ಷಾ ಕವಚ ವ್ಯವಸ್ಥೆ ಟ್ರಯಂಫ್‌ ಎಸ್‌-400ಅನ್ನು ಖರೀದಿ ಮಾಡಲು ಭಾರತ ಇನ್ನಷ್ಟು ತ್ವರಿತಗತಿಯಲ್ಲಿ ಹೆಜ್ಜೆ ಇಟ್ಟಿದೆ.
ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸುಮಾರು 39,000 ಕೋಟಿ ರು ಮೌಲ್ಯದ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ ಎನ್ನಲಾಗಿದೆ. ವರದಿಯಲ್ಲಿರುವಂತೆ ಕ್ಷಿಪಣಿ ವ್ಯವಸ್ಥೆ ಖರೀದಿ ಸಂಬಂಧ ಒಪ್ಪಂದದಲ್ಲಿದ್ದ ಕೆಲ ಸಮಸ್ಯೆಗಳನ್ನು ನಿವಾರಿಸಲು ಒಪ್ಪಂದದಲ್ಲಿ ಕೆಲ ತಿದ್ದುಪಡಿ ಮಾಡಿ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ ಎನ್ನಲಾಗಿದೆ.
ಈ ಸಂಬಂಧ ಕಳೆದ ಗುರುವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ರಕ್ಷಣಾ ಸ್ವಾಧೀನ ಸಮಿತಿ ಸಭೆ ಸೇರಿದ್ದು, ಸಭೆಯಲ್ಲಿ ರಷ್ಯಾದ ರಕ್ಷಣಾ ಅಧಿಕಾರಿಗಳೂ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ವೇಳೆ ಸಚಿವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. 
ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಇಲಾಖೆ ಮೂಲಗಳು, ರಷ್ಯಾದ ಎಸ್‌-400 ಖರೀದಿ ಪ್ರಕರಣ ಈಗ ವಿತ್ತ ಸಚಿವಾಲಯದ ಮುಂದೆ ಹೋಗಲಿದ್ದು, ಬಳಿಕ ಅಂತಿಮವಾಗಿ ಪ್ರಧಾನ ಮಂತ್ರಿ ನೇತೃತ್ವದ ರಕ್ಷಣಾ ‌ವ್ಯವಹಾರಗಳ ಸಂಪುಟ ಸಮಿತಿ ಎದುರು ಪ್ರಸ್ತುತಪಡಿಸಲಾಗುವುದು. ಒಪ್ಪಂದಕ್ಕೆ ಸಹಿ ಮಾಡಲು ದೇಶದ ಅಗ್ರ ರಾಜಕೀಯ ನಾಯಕತ್ವ ಅಂತಿಮ ನಿರ್ಧಾರಕ್ಕೆ ಬರಬೇಕಿದೆ ಎಂದು ತಿಳಿದುಬಂದಿದೆ.
ಇನ್ನು ಜುಲೈ 6ರಂದು ನಡೆಯಬೇಕಿದ್ದ ವಿದೇಶಾಂಗ ಹಾಗು ರಕ್ಷಣಾ ಇಲಾಖೆಗಳ ಮಟ್ಟದ ಭಾರತ-ಅಮೆರಿಕ ಮಟ್ಟದ ಸಭೆಯನ್ನು ವಾಷಿಂಗ್ಟನ್‌ ಕಡೆ ಘಳಿಗೆಯಲ್ಲಿ ರದ್ದು ಪಡಿಸಿದ ಬಳಿಕ ಭಾರತ ಈ ನಡೆ ಇಟ್ಟಿರುವುದು ಪ್ರಮುಖವಾಗಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಮೆರಿಕ ಭೇಟಿ ನೀಡಿ, ಶ್ವೇತ ಭವನದ ತಮ್ಮ ಸಹವರ್ತಿಗಳಾದ ಮೈಕ್‌ ಪಾಂಪೆಯೋ ಹಾಗು ಜೇಮ್ಸ್ ಮ್ಯಾಟಿಸ್‌ರನ್ನು ಭೇಟಿ ಮಾಡಬೇಕಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com