ಅತ್ಯಾಚಾರ ಪ್ರಕರಣಗಳನ್ನು ಶ್ರೀರಾಮ ಕೂಡ ತಡೆಯಲು ಸಾಧ್ಯವಿಲ್ಲ: ಉತ್ತರಪ್ರದೇಶ ಬಿಜೆಪಿ ಶಾಸಕ

ಶ್ರೀರಾಮ ಕೂಡ ಅತ್ಯಾಚಾರ ಪ್ರಕರಣಗಳಿಗೆ ಅಂತ್ಯ ಹಾಡಲು ಸಾಧ್ಯವಿಲ್ಲ ಎಂದು ಉತ್ತರಪ್ರದೇಶ ರಾಜ್ಯದ ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ...
ಬೈರಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್
ಬೈರಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್
Updated on: 
ಬಲಿಯಾ: ಶ್ರೀರಾಮ ಕೂಡ ಅತ್ಯಾಚಾರ ಪ್ರಕರಣಗಳಿಗೆ ಅಂತ್ಯ ಹಾಡಲು ಸಾಧ್ಯವಿಲ್ಲ ಎಂದು ಉತ್ತರಪ್ರದೇಶ ರಾಜ್ಯದ ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. 
ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬೈರಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್ ಅವರು, ಶ್ರೀರಾಮ ಕೂಡ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಸಂಪೂರ್ಣ ವಿಶ್ವಾಸದೊಂದಿಗೆ ಹೇಳುತ್ತೇನೆಂದು ಹೇಳಿದ್ದಾರೆ. 
ಅತ್ಯಾಚಾರ ಎಂಬುದು ನೈಸರ್ಗಿತ ಮಾಲಿನ್ಯವಾಗಿದ್ದು, ಅದು ಯಾರನ್ನೂ ಬಿಡುವುದಿಲ್ಲ. ಇತರರನ್ನು ತಮ್ಮ ಕುಟುಂಬ ಸದಸ್ಯರು, ಸಹೋದರಿಯರು ಎಂದು ತಿಳಿಯುವುದು ಜನರ ಜವಾಬ್ದಾರಿಯಾಗಿದೆ. ಅದನ್ನು ಮೌಲ್ಯದಿಂದ ನಿಯಂತ್ರಿಸಬಹುದೇ ವಿನಃ, ಸಂವಿಧಾನದ ಮೂಲಕವಲ್ಲ ಎಂದು ತಿಳಿಸಿದ್ದಾರೆ. 
ಈ ಹಿಂದೆ ಕೂಡ ಸುರೇಂದ್ರ ಸಿಂಗ್ ಅವರು ಇದೇ ರೀತಿಯ ವಿವಾದಾತ್ಮಯ ಹೇಳಿಕೆಯನ್ನು ನೀಡಿದ್ದರು. ಸರ್ಕಾರಿ ಸಿಬ್ಬಂದಿಗಳಿಗಿಂತ ವೇಶ್ಯೆಯರೇ ಎಷ್ಟೋ ಉತ್ತಮ. ಅತ್ಯಾಚಾರದಂತಹ ಘಟನೆಗಲು ಹೆಚ್ಚಲು ಪೋಷಕರು ಹಾಗೂ ಸ್ಮಾರ್ಟ್ ಫೋನ್'ಗಳೇ ಕಾರಣ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com