ಪ್ರಣಬ್ ಮುಖರ್ಜಿ ಆಹ್ವಾನಿಸಲು ನಮಗೆ ಯಾವುದೇ ರೀತಿಯ ಹಿಂಜರಿಕೆ ಇರಲಿಲ್ಲ; ಮೋಹನ್ ಭಾಗವತ್

ಎಲ್ಲಾ ಆದರ್ಶಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಪರಿಗಣಿಸಲಿದ್ದು, ಹೀಗಾಗಿಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಆಹ್ವಾನಿಸಲು ನಮಗೆ ಯಾವುದೇ ರೀತಿ ಹಿಂಜರಿಕೆಗಳುಂಟಾಗಲಿಲ್ಲ ಎಂದು ಆರ್'ಎಸ್ಎಸ್ ಮುಖ್ಯಸ್ಥ ಮೋಹನ್...
ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
Updated on: 
ನಾಗ್ಪುರ: ಎಲ್ಲಾ ಆದರ್ಶಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಪರಿಗಣಿಸಲಿದ್ದು, ಹೀಗಾಗಿಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಆಹ್ವಾನಿಸಲು ನಮಗೆ ಯಾವುದೇ ರೀತಿ ಹಿಂಜರಿಕೆಗಳುಂಟಾಗಲಿಲ್ಲ ಎಂದು ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ. 
ನಾಗ್ಪುರದಲ್ಲಿ ಎಬಿವಿಪಿ ಆಯೋಜಿಸಿದ್ದ ಪ್ರೇರಣಾ ವಿದ್ಯಾರ್ಥಿ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ಒಂದು ಪಕ್ಷದಲ್ಲಿದ್ದಾಗ ಪ್ರಣಬ್ ಮುಖರ್ಜಿಯವರನ್ನು ಕಾಂಗ್ರೆಸ್'ಗೆ ಸೇರಿದವರು ಎಂದು ಹೇಳಬಹುದಿತ್ತು. ಆದರೆ, ಅವರು ಭಾರತದ ರಾಷ್ಟ್ರಪತಿಗಳಾದ ಬಳಿಕ ಅವರು ದೇಶಕ್ಕೆ ಸಂಬಂಧಿಸಿದವರಾಗಿದ್ದರು ಎಂದು ಹೇಳಿದ್ದಾರೆ. 
ಪ್ರಣಬ್ ಮುಖರ್ಜಿಯವರನ್ನು ಆಹ್ವಾನಿಸಿದ್ದಕ್ಕೆ ಹಾಗೂ ಅವರು ನಮ್ಮ ಆಹ್ವಾನವನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ನಮಗೆ ಯಾವುದೇ ರೀತಿಯ ಹಿಂಜರಿಕೆಗಳಿಲ್ಲ. ನಾವೆಲ್ಲರೂ ಒಂದು ದೇಶಕ್ಕೆ ಸಂಬಂಧಿಸಿದವರಾಗಿದ್ದೇವೆ. ಪ್ರತೀಯೊಬ್ಬರ ನಡುವೆಯೂ ಆತ್ಮೀಯತೆ ಇರಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com