ಪ್ರೇಯಸಿಯರ ಕಿತ್ತಾಟದಿಂದಾಗಿ ಜೈಲು ಸೇರಿದ ಕುಖ್ಯಾತ ಗ್ಯಾಂಗ್ ಸ್ಟರ್ ದಲ್ ಪ್ರೀತ್ ಸಿಂಗ್!

ತನ್ನ ಇಬ್ಬರು ಪ್ರೇಯಸಿಯರ ಜಗಳದಿಂದಾಗಿ ಪಂಜಾಬ್ ಕುಖ್ಯಾತ ಗ್ಯಾಂಗ್ ಸ್ಟರ್ ದಲ್ ಪ್ರೀತ್ ಸಿಂಗ್ ನನ್ನು ಪೊಲೀಸರು ಬಂಧಿಸಿರುವ ಘಟನೆ ಚಂಡೀಘಡದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಂಡೀಘಡ: ತನ್ನ ಇಬ್ಬರು ಪ್ರೇಯಸಿಯರ ಜಗಳದಿಂದಾಗಿ ಪಂಜಾಬ್ ಕುಖ್ಯಾತ ಗ್ಯಾಂಗ್ ಸ್ಟರ್ ದಲ್ ಪ್ರೀತ್ ಸಿಂಗ್ ನನ್ನು ಪೊಲೀಸರು ಬಂಧಿಸಿರುವ ಘಟನೆ ಚಂಡೀಘಡದಲ್ಲಿ ನಡೆದಿದೆ.
ಚಂಡೀಘಡ ಮತ್ತು ಪಂಜಾಬ್ ಪೊಲೀಸರಿಗೆ ಸುಮಾರು ದಶಕಕ್ಕೂ ಹೆಚ್ಚು ಕಾಲ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಗ್ಯಾಂಗ್ ಸ್ಟರ್ ದಲ್ ಪ್ರೀತ್ ಸಿಂಗ್ ತನ್ನದೇ ಇಬ್ಬರು ಪ್ರೇಯಸಿರಿಂದಲೇ ಪೊಲೀಸರಿಗೆ ಸಿಕ್ಕಿಬಿದಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ ದಲ್ ಪ್ರೀತ್ ಸಿಂಗ್ ಸಹೋದರಿಯರಾದ ಹರ್ಪೀತ್ ಕೌರ್ ಹಾಗೂ ರೂಪಿಂದರ್ ಕೌರ್ ಎಂಬ ಇಬ್ಬರು ಮಹಿಳೆಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದನಂತೆ. ಈ ಪೈಕಿ ಹರ್ ಪ್ರೀತ್ ಕೌರ್ ವಿಧವೆಯಾಗಿದ್ದು, ಏಕಾಂಗಿಯಾಗಿದ್ದ ಹರ್ ಪ್ರೀತ್ ಕೌರ್ ದಲ್ ಪ್ರೀತ್ ಸಿಂಗ್ ಪ್ರೀತಿ ಪಾಶಕ್ಕೆ ಸಿಲುಕಿದ್ದಳು. ಇನ್ನು ರೂಪಿಂದರ್ ಕೌರ್ ಳನ್ನು ಆಕೆಯ ಗಂಡ ತೊರೆದಿದ್ದ, ಹೀಗಾಗಿ ಆಕೆ ಕೂಡ ಏಕಾಂಗಿಯಾಗಿದ್ದಳು.
ದಲ್ ಪ್ರೀತ್ ಕೌರ್ ಕಪುರ್ಥಲಾ ಜೈಲಿನಲ್ಲಿದ್ದಾಗ ಆತ ಹರ್ ಪ್ರೀತ್ ಕೌರ್ ಳೊಂದಿಗೆ ಸ್ನೇಹ ಸಂಬಂಧ ಬೆಳೆಸಿದ್ದನಂತೆ. ಸುಮಾರು 8 ವರ್ಷಗಳ ಪ್ರೀತಿ ಸಂಬಂಧದ ಬಳಿಕ ದಲ್ ಪ್ರೀತ್ ಸಿಂಗ್ ಆಕೆಯ ಸಹೋದರಿ ರೂಪಿಂದರ್ ಕೌರ್ ಳೊಂದಿಗೆ ಪರಿಚಯ ಬೆಳೆಸಿಕೊಂಡು ಸಹಜೀವನ ಆರಂಭಿದನಂತೆ. ದಲ್ ಪ್ರೀತ್ ಸಿಂಗ್ ನೊಂದಿಗೆ ಸೇರಿದ ರೂಪಿಂದರ್ ಕೌರ್ ತನ್ನ ನಿವಾಸವನ್ನು ಚಂಡೀಘಡದ ವಹೆಗುರು ಪ್ರದೇಶಕ್ಕೆ ಬದಲಿಸಿದ್ದಳಂತೆ. ಅಲ್ಲದೆ ಅಲ್ಲದೆ ದಲ್ ಪ್ರೀತ್ ನನ್ನು ತನ್ನ ಪತಿ ಎಂದು ಹೇಳಿಕೊಂಡು ತಿರುಗುತಿದ್ದಳಂತೆ. ದಲ್ ಪ್ರೀತ್ ಕೌರ್ ತನ್ನ ಪ್ರೇಯಸಿಯ ರಕ್ಷಣೆಗಾಗಿ ತನ್ನ ಪಟಾಲಂ ಕೆಲ ಹುಡುಗರನ್ನು ಮನೆಯ ಬಳಿ ಬಿಟ್ಟಿದ್ದನಂತೆ.
ಈ ವಿಚಾರ ತಿಳಿದ ಹರ್ ಪ್ರೀತ್ ಕೌರ್ ಆಕ್ರೋಶದಿಂದ ಕುದಿಯುತ್ತಿರುವಾಗಲೇ ದಲ್ ಪ್ರೀತ್ ಸಿಂಗ್ ನನ್ನು ಹುಡುಕಿಕೊಂಡು ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹರ್ ಪ್ರೀತ್ ಕೌರ್ ತನ್ನ ಸಹೋದರಿ ರೂಪಿಂದರ್ ಕೌರ್ ಕುರಿತ ವಿಚಾರವನ್ನು ಬಹಿರಂಗ ಪಡಿಸಿದ್ದಾಳೆ. ಅಲ್ಲದೆ ದಲ್ ಪ್ರೀತ್ ಸಿಂಗ್ ನ ಮಾದಕ ವಸ್ತು ಮಾರಾಟ, ಅಕ್ರಮ ಶಸ್ತ್ರಾಸ್ತ್ರ ಮಾರಾಟದ ಕುರಿತು ಪೊಲೀಸಿರಿಗೆ ಮಾಹಿತಿ ನೀಡಿದ್ದು, ಆಕೆ ನೀಡಿದ ಮಾಹಿತಿ ಮೇರೆದೆ ಗ್ಯಾಂಗ್ ಸ್ಟರ್ ದಲ್ ಪ್ರೀತ್ ಸಿಂಗ್  ಮತ್ತು ಆತನ ಪ್ರೇಯಸಿ ರೂಪಿಂದರ್ ಕೌರ್ ಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com