ಉನ್ನಾವೋ ಅತ್ಯಾಚಾರ :ಬಿಜೆಪಿ ಶಾಸಕ ಕುಲದೀಪ್ ಸಿಂಗ್ ವಿರುದ್ಧ ಸಿಬಿಐ ಚಾರ್ಜ್ ಶೀಟ್ ದಾಖಲು

ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಸಿಬಿಐ ಇಂದು ಚಾರ್ಚ್ ಶೀಟ್ ದಾಖಲಿಸಿದೆ.
ಕುಲದೀಪ್ ಸಿಂಗ್ ಸೆಂಗರ್
ಕುಲದೀಪ್ ಸಿಂಗ್ ಸೆಂಗರ್

ನವದೆಹಲಿ:  ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಸಿಬಿಐ ಇಂದು ಚಾರ್ಚ್ ಶೀಟ್ ದಾಖಲಿಸಿದೆ.

ಬಾಲಕಿ ಮೇಲೆ ಅತ್ಯಾಚಾರ ನಡೆಸುವುದರ ಜೊತೆಗೆ ಕಾರಾಗೃಹದಲ್ಲಿ ಬಾಲಕಿ ತಂದೆಯ ಕೊಲೆ  ಪ್ರಕರಣದಲ್ಲಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಚಾರ್ಚ್ ಶೀಟ್ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ಜಾರ್ಜ್ ಶೀಟ್ ನಲ್ಲಿ  ಸೆಂಗರ್ ಹೆಸರನ್ನು ಮಾತ್ರ ಸೇರಿಸಲಾಗಿದೆ. ಜುಲೈ 7 ರಂದು  ಸಿಬಿಐ ತನ್ನ ಮೊದಲ ಚಾರ್ಚ್ ಶೀಟ್ ನಲ್ಲಿ  ಸಂಗರ್ ಸಹೋದರ ಹಾಗೂ ಇತರ ನಾಲ್ವರ  ಹೆಸರನ್ನು ಸೇರಿಸಲಾಗಿತ್ತು.

ಕಳೆದ ವರ್ಷ ತಮ್ಮ ಸಂಬಂಧಿಕರಿಗೆ ಕೆಲಸ ಕೇಳಲು   ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮನೆಗೆ  ಹೋಗಿದ್ದ 17 ವರ್ಷದ ಬಾಲಕಿ ಮೇಲೆ  ಅತ್ಯಾಚಾರ ನಡೆಸಲಾಗಿತ್ತು. ಆ ಬಾಲಕಿ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಮುಂಭಾಗದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ನಂತರ ಆಕೆಯ ತಂದೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕಾಗಿ  ಏಪ್ರಿಲ್ 3 ರಂದು ದೆಹಲಿಯ ನ್ಯಾಯಾಲಯದಲ್ಲಿ ಹಾಜರಾಗಿದ್ದರು.  ಅಂದು ಸಂಜೆ ಆತನ ಮನೆ ಮುಂದೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿತ್ತು. ಇದರಿಂದಾಗಿ ಆತ  ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com