ಕ್ರೂರ ಮನಸ್ಥಿತಿ: ಅಶ್ಲೀಲ ವಿಡಿಯೋ ನೋಡಿ 8 ವರ್ಷದ ಬಾಲಕಿ ಮೇಲೆ 5 ಬಾಲಕರಿಂದ ಸಾಮೂಹಿಕ ಅತ್ಯಾಚಾರ

ಅಶ್ಲೀಲ ವಿಡಿಯೋ ನೋಡಿದ ಐವರು ಬಾಲಕರು ನೆರೆಮನೆಯಲ್ಲಿದ್ದ ಎಂಟು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಡೆಹರಾಡೂನ್: ಅಶ್ಲೀಲ ವಿಡಿಯೋ ನೋಡಿದ ಐವರು ಬಾಲಕರು ನೆರೆಮನೆಯಲ್ಲಿದ್ದ ಎಂಟು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. 
ಸಹಾಸ್ ಪುರದಲ್ಲಿ ಈ ಘಟನೆ ನಡೆದಿದ್ದು ಪೋಷಕರು ಮನೆಯಲ್ಲಿದ್ದನ್ನು ಕಂಡ ಐವರು ಬಾಲಕರು ಸಂತ್ರಸ್ತ ಬಾಲಕಿಯ ಮನೆಗೆ ನುಗ್ಗಿ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರ ನಡೆಸಿದ ಬಾಲಕರೆಲ್ಲರು 9 ರಿಂದ 14 ವರ್ಷ ಪ್ರಾಯದವರಾಗಿದ್ದಾರೆ. 
ಇನ್ನು ಅತ್ಯಾಚಾರ ನಡೆಸಿದ ಆರೋಪಿಗಳು ಎರಡು ದಿನ ಮೊದಲು ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿದ್ದಾಗಿ ಪೊಲೀಸರಿಗೆ ಹೇಳಿದ್ದಾರೆ. ಜುಲೈ 12ರಂದು ಈ ಘಟನೆ ನಡೆದಿದ್ದು ಪೋಷಕರು 14ರಂದು ಪೊಲೀಸರಿಗೆ ದೂರು ನೀಡಿದ್ದಾರೆ. 
ಬಂಧಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಅವರನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ ಎಂದು ಬಾಲಾಪರಾಧ ನ್ಯಾಯ ಮಂಡಳಿಯ ಚೀಫ್ ಮ್ಯಾಜಿಸ್ಟ್ರೇಟ್ ಭಾವದೀಪ್ ರಾವತ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com