ಸ್ನೇಹಿತನ ಮೂರುವರೆ ವರ್ಷದ ಮಗುವಿನ ಮೇಲೆ ಕಾಮಾಂಧನಿಂದ ಅತ್ಯಾಚಾರ!

49 ವರ್ಷದ ಕಾಮಾಂಧನೊಬ್ಬ ತನ್ನ ಸ್ನೇಹಿತನ ಮೂರುವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸುವ ಮೂಲಕ ಪೈಶಾಚಿಕ ಕೃತ್ಯ ನಡೆಸಿದ್ದಾನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತ್ತಾ: 49 ವರ್ಷದ ಕಾಮಾಂಧನೊಬ್ಬ ತನ್ನ ಸ್ನೇಹಿತನ ಮೂರುವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸುವ ಮೂಲಕ ಪೈಶಾಚಿಕ ಕೃತ್ಯ ನಡೆಸಿದ್ದಾನೆ. 
ಆರೋಪಿ ರಾಮಶಂಕರ್ ಶಾ ಬಿಹಾರ ಮೂಲದ ವ್ಯಾಪಾರಿ. ಈತ ಅತ್ಯಾಚಾರ ಸಂತ್ರಸ್ತ ಮಗುವಿನ ಮನೆಯ ಪಕ್ಕದಲ್ಲಿ ಅಂಗಡಿಯೊಂದನ್ನು ತೆರೆದಿದ್ದ. ಇದರಿಂದಾಗಿ ಸಂತ್ರಸ್ತ ಮಗುವಿನ ತಂದೆಗೂ ರಾಮಶಂಕರ್ ಗೂ ಸ್ನೇಹ ಏರ್ಪಟಿತ್ತು. 
ಈ ಸಲಿಗೆಯಿಂದ ರಾಮಶಂಕರ್ ಮದ್ಯವನ್ನು ತೆಗೆದುಕೊಂಡು ಸ್ನೇಹಿತನ ಮನೆಗೆ ಬಂದಿದ್ದಾನೆ. ಇಬ್ಬರು ಜೊತೆಗೂಡಿ ಚೆನ್ನಾಗಿ ಮದ್ಯ ಸೇವಿಸಿದ್ದಾರೆ. ನಂತರ ಸಂತ್ರಸ್ತ ಮಗುವಿನ ತಂದೆ ಕುಡಿದು ಚಿತ್ತಾಗಿ ಮಲಗಿಕೊಂಡಿದ್ದಾನೆ. ಈ ವೇಳೆಯಲ್ಲಿ ರಾಮಶಂಕರ್ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. 
ಹೊರಗೆ ಹೋಗಿದ್ದ ಸಂತ್ರಸ್ತ ಮಗುವಿನ ತಾಯಿ ಮನೆಗೆ ಬಂದು ನೋಡಿದಾಗ ತನ್ನ ಮೂರುವರೆ ವರ್ಷದ ಮಗು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗಾಬರಿಯಾಗಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ರಾಮಶಂಕರ್ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ. 
ಸದ್ಯ ಆರೋಪಿ ರಾಮಶಂಕರ್ ನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಪೋಸ್ಕೋ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com